×
Ad

ಪಾಕಿಸ್ತಾನ ಹಾಕಿ ಒಕ್ಕೂಟದ ಕಾರ್ಯದರ್ಶಿ ರಾಜೀನಾಮೆ

Update: 2018-12-29 23:51 IST

ಇಸ್ಲಾಮಾಬಾದ್, ಡಿ.29: ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ದೇಶದಲ್ಲಿ ಮಲತಾಯಿಯಂತೆ ಕಾಣಲಾಗುತ್ತಿದೆ ಎಂದು ಆರೋಪಿಸಿ ಪಾಕಿಸ್ತಾನದ ಹಾಕಿ ಒಕ್ಕೂಟದ (ಪಿಎಚ್‌ಎಫ್)ಕಾರ್ಯದರ್ಶಿ ಹುದ್ದೆಗೆ ಶಹಬಾಝ್ ಅಹ್ಮದ್ ರಾಜೀನಾಮೆ ನೀಡಿದ್ದಾರೆ.

ಈ ಕುರಿತು ಶನಿವಾರ ಪಿಎಚ್‌ಎಫ್ ಕಾರ್ಯನಿರ್ವಹಣಾ ಪ್ರತಿನಿಧಿಗಳ ಸಮ್ಮೇಳನದ ಸಭೆಯಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಸರಕಾರ ಹಾಗೂ ಪ್ರಾಂತೀಯ ಸಹಕಾರ ಸಚಿವಾಲಯ ಎರಡಕ್ಕೂ ರಾಷ್ಟ್ರೀಯ ಆಟವಾದ ಹಾಕಿಯ ಸಮಸ್ಯೆಗಳನ್ನು ಆಲಿಸಲು ಸಮಯ ಹಾಗೂ ನೀಡಲು ಅನುದಾನವೂ ಇಲ್ಲ. ತನಗೂ ಕೂಡ ಸಮಯ ಇಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ನಡೆದ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡ ನೀಡಿದ ಕಳಪೆ ಪ್ರದರ್ಶನದ(ಒಂದೇ ಒಂದು ಪಂದ್ಯವನ್ನು ಗೆಲ್ಲಲಿಲ್ಲ) ಕುರಿತು ಚರ್ಚೆಗೆ ಸಭೆ ಕರೆಯಲಾಗಿತ್ತು. ಭುವನೇಶ್ವರದಲ್ಲಿ ಪಾಕಿಸ್ತಾನದ ನೀರಸ ಪ್ರದರ್ಶನದ ಹಿನ್ನೆಲೆಯಲ್ಲಿ ಈಗಾಗಲೇ ತಂಡದ ಮುಖ್ಯ ಕೋಚ್, ಕೋಚ್‌ಗಳು ಹಾಗೂ ವ್ಯವಸ್ಥಾಪಕರು ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News