ಚೆಂಡು ವಿರೂಪ ಪ್ರಕರಣ: ಬ್ಯಾಂಕ್ರಾಫ್ಟ್ ನಿಷೇಧ ಅವಧಿ ಮುಕ್ತಾಯ
Update: 2018-12-29 23:58 IST
ಮೆಲ್ಬೋರ್ನ್, ಡಿ.29: ಚೆಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯದ ಮಾಜಿ ಆರಂಭಿಕ ಆಟಗಾರ ಕ್ಯಾಮರೂನ್ ಬ್ಯಾಂಕ್ರಾಫ್ಟ್‌ಗೆ ವಿಧಿಸಲಾಗಿದ್ದ 9 ತಿಂಗಳ ನಿಷೇಧ ಶನಿವಾರ ಮುಕ್ತಾಯವಾಗಿದ್ದು, ಅವರು ಬಿಗ್‌ಬ್ಯಾಶ್ ಟೂರ್ನಿಯಲ್ಲಿ ಪರ್ತ್ ಸ್ಕಾಚರ್ಸ್ ತಂಡದ ಪರ ಆಡಲಿದ್ದಾರೆ.
ದಕ್ಷಿಣ ಆಫಿಕದ ಕೇಪ್‌ಟೌನ್‌ನಲ್ಲಿ ನಡೆದ ಚೆಂಡು ವಿರೂಪ ಪ್ರಕರಣದಲ್ಲಿ ಅಂತರ್‌ರಾಷ್ಟ್ರೀಯ, ರಾಜ್ಯ ಹಾಗೂ ಬಿಗ್‌ಬ್ಯಾಶ್ ಟೂರ್ನಿಗಳಿಂದ ಬ್ಯಾಂಕ್ರಾಫ್ಟ್ 9 ತಿಂಗಳ ಅವಧಿಗೆ ನಿಷೇಧಕ್ಕೊಳಗಾಗಿದ್ದರು.ಇದೇ ಪ್ರಕರಣದಲ್ಲಿ ಆಸೀಸ್ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಹಾಗೂ ಉಪನಾಯಕ ಡೇವಿಡ್‌ವಾರ್ನರ್ 12 ತಿಂಗಳ ಅವಧಿಗೆ ನಿಷೇಧಕ್ಕೊಳಗಾಗಿದ್ದಾರೆ. ಬಿಗ್‌ಬ್ಯಾಶ್ ಟೂರ್ನಿಯಲ್ಲಿ ಬ್ಯಾಂಕ್ರಾಫ್ಟ್ ರವಿವಾರ ನಡೆಯಲಿರುವ ಪಂದ್ಯದಲ್ಲಿ ಹೋಬರ್ಟ್ ಹರ್ರಿಕೇನ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಸ್ಮಿತ್ ಹಾಗೂ ವಾರ್ನರ್ ಅವರ ನಿಷೇಧ 2019ರ ಮಾರ್ಚ್ ಅಂತ್ಯದಲ್ಲಿ ಕೊನೆಗೊಳ್ಳಲಿದೆ.