ಕನ್ನಂಗಾರ್ ರೇಂಜ್ ಮಟ್ಟದ ಪ್ರತಿಭಾ ಸಂಗಮ

Update: 2019-01-01 14:31 GMT

ಕಾಪು, ಜ.1: ಕಂಚಿನಡ್ಕ ನೂರುಲ್ ಹುದಾ ಮದ್ರಸ ವಠಾರದಲ್ಲಿ ಇತ್ತೀಚೆಗೆ ಜರಗಿದ ಕನ್ನಂಗಾರ್ ರೇಂಜ್ ಮಟ್ಟದ ಪ್ರತಿಭಾ ಸಂಗಮ ಕಾರ್ಯಕ್ರಮದಲ್ಲಿ ಉಚ್ಚಿಲ ಸಯ್ಯದ್ ಅರಬಿ ಮದ್ರಸ ಚಾಂಪಿಯನ್ ಆಗಿ ಮೂಡಿಬಂದಿದೆ.

ಮೂಳೂರು ಅಲ್ ಇಹ್ಸಾನ್ ಅಕಾಡೆಮಿ ಮದ್ರಸವು ದ್ವಿತೀಯ ಸ್ವಾನವನ್ನು ಪಡೆದುಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 19 ಮದ್ರಸಗಳ 275ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ರಾಜ್ಯ ಪ್ರತಿಭಾ ಸಂಗಮದ ಸಂಚಾಲಕ ಇಬ್ರಾಹೀಂ ನಹೀಮಿ ಮೂಳೂರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ನೂರುಹುದಾ ಜಮಾಅತ್ ಕೋಶಾಧಿಾರಿ ಅಬ್ದುಲ್ ರೆಹಮಾನ್ ವಹಿಸಿದ್ದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಸೀದಿಯ ಖತೀಬ್ ಲತೀಫ್ ಮದನಿ ವಹಿಸಿದ್ದರು. ಕನ್ನಂಗಾರ್ ರೇಂಜ್ ಪ್ರಧಾನ ಕಾರ್ಯದರ್ಶಿ ಹಮೀದ್ ಮದನಿ, ಪ್ರತಿಭಾ ಸಂಗಮದ ಅಧಯಕ್ಷ ಮುಹ್ಸಿನ್ ಲತೀಫ್ ಉಪ ಸ್ಥಿತರಿದ್ದರು. ಕೆ.ಪಿ.ಶರೀಫ್ ಸಖಾಫಿ ಸ್ವಾಗತಿಸಿದರು. ಸಾಹುಲ್ ಹಮೀದ್ ನಯಿಮಿ ಕನ್ನಂಗಾರ್ ವಂದಿಸಿದರು. ಅಬ್ದುಲ್ ಕರೀಂ ಪೊಲ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News