ಶಬರಿಮಲೆಗೆ ಮಹಿಳೆಯರ ಪ್ರವೇಶ: ತಿರುವನಂತಪುರಂನಲ್ಲಿ ಬಿಜೆಪಿ-ಸಿಪಿಎಂ ಕಾರ್ಯಕರ್ತರ ಹೊಡೆದಾಟ
Update: 2019-01-02 19:08 IST
ತಿರುವನಂತಪುರಂ, ಜ.2: ಶಬರಿಮಲೆ ದೇವಳಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ ನಂತರ ಇಲ್ಲಿನ ಸೆಕ್ರೆಟರಿಯೇಟ್ ಕಚೇರಿ ಮುಂಭಾಗ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ನಡುವ ಘರ್ಷಣೆ ನಡೆದಿದೆ. ಹೊಡೆದಾಟ ನಿಯಂತ್ರಿಸಲು ಪೊಲೀಸರು ಸ್ಟನ್ ಗ್ರೆನೇಡ್ ಗಳು ಮತ್ತು ಅಶ್ರುವಾಯು ಸಿಡಿಸಿದ್ದಾರೆ.
ಶಬರಿಮಲೆ ದೇವಳಕ್ಕೆ ಇಬ್ಬರು ಮಹಿಳೆಯರು ಪ್ರವೇಶಿಸಿದ್ದಾರೆ ಎನ್ನುವ ಸುದ್ದಿ ತಿಳಿದುಬರುತ್ತಲೇ ರಾಜ್ಯದಲ್ಲಿ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಇದೀಗ ತಿರುವನಂತಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.