ರಫೇಲ್ ವಿವಾದ: ನಮ್ಮ ಸರಕಾರ ಪಾರದರ್ಶಕವಾಗಿದೆ, ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಲಿ
Update: 2019-01-02 19:25 IST
ಹೊಸದಿಲ್ಲಿ, ಜ.2: ರಫೇಲ್ ಒಪ್ಪಂದದ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎಂಬ ವಿಪಕ್ಷಗಳ ಆಗ್ರಹಕ್ಕೆ ಬಿಜೆಪಿ ಮಿತ್ರಪಕ್ಷ ಶಿವಸೇನೆ ಬೆಂಬಲ ವ್ಯಕ್ತಪಡಿಸಿದೆ.
ರಫೇಲ್ ವಿವಾದಕ್ಕೆ ಸಂಬಂಧಿಸಿ ಮಾತನಾಡಿದ ಶಿವಸೇನೆಯ ಅರವಿಂದ್ ಸಾವಂತ್ ಸರಕಾರವು ಪಾರದರ್ಶಕತೆಯ ಬಗ್ಗೆ ಮಾತನಾಡುತ್ತಿದೆ. ಆದರೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಏಕೆ ತಿರಸ್ಕರಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.
“ನಾವು ಪಾರದರ್ಶಕವಾಗಿದ್ದೇವೆ. ನಾವೇಕೆ ಹೆದರಬೇಕು. ನಮ್ಮ ಸರಕಾರ ಉತ್ತಮವಾಗಿದೆ. ಅದು ಭ್ರಷ್ಟವಲ್ಲ, ಹಾಗಾದರೆ ನಾವೇಕೆ ಹೆದರಬೇಕು? ಈ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಯಲಿ ಹಾಗು ಸತ್ಯ ಹೊರಬರಲಿ” ಎಂದವರು ಹೇಳಿದರು.