ತೂತುಕುಡಿ ತಾಮ್ರ ಘಟಕ: ಎನ್‌ಜಿಟಿ ಆದೇಶದ ವಿರುದ್ಧ ತಮಿಳುನಾಡು ಸರಕಾರ ಮೇಲ್ಮನವಿ
Update: 2019-01-03 22:34 IST
ಹೊಸದಿಲ್ಲಿ, ಜ. 3: ತೂತುಕುಡಿಯಲ್ಲಿರುವ ವೇದಾಂತ ಲಿಮಿಟೆಡ್‌ನ ಸ್ಟರ್ಲೈಟ್ ತಾಮ್ರ ಘಟಕ ಮರು ಆರಂಭಿಸಲು ಎನ್‌ಜಿಟಿ ನೀಡಿದ ಆದೇಶದ ವಿರುದ್ಧ ತಮಿಳುನಾಡು ಸರಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯನ್ನು ಜನವರಿ 8ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ನಿರ್ಧರಿಸಿದೆ.
ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಹಾಗೂ ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರನ್ನು ಒಳಗೊಂಡ ಪೀಠ ಮುಂದಿನ ವಾರ ನಡೆಸಲಿದೆ.
ವೇದಾಂತದ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಸಿ.ಎ. ಸುಂದರಂ, ಎನ್‌ಜಿಟಿ ಆದೇಶದ ವಿರುದ್ಧ ತಮಿಳುನಾಡು ಸರಕಾರ ಮೇಲ್ಮನವಿ ಸಲ್ಲಿಸಿದೆ ಎಂದರು.