ಖ್ಯಾತ ಬಂಗಾಳಿ ಲೇಖಕ ದಿಬ್ಯೇಂದು ಪಾಲಿತ್ ನಿಧನ

Update: 2019-01-03 17:20 GMT

ಕೋಲ್ಕತ್ತಾ, ಜ. 3: ವಯೋ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ಖ್ಯಾತ ಬಂಗಾಳಿ ಲೇಖಕ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದಿಬ್ಯೇಂದು ಪಾಲಿತ್ ಗುರುವಾರ ಇಲ್ಲಿ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಅವರು ಪುತ್ರನನ್ನು ಅಗಲಿದ್ದಾರೆ. ಇಲ್ಲಿನ ಜಾಧವ್‌ ಪುರದ ಖಾಸಗಿ ಆಸ್ಪತ್ರೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಅವರು ಕೊನೆಯುಸಿರೆಳೆದರು.

ಅವರ ಪತ್ನಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದರು. ವಿದೇಶದಲ್ಲಿರುವ ಪುತ್ರ ಭಾರತಕ್ಕೆ ಆಗಮಿಸಿದ ಬಳಿಕ ಅಂತಿಮ ಸಂಸ್ಕಾರ ನಡೆಸಲಾಗುವುದು ಕುಟುಂಬದ ಮೂಲಗಳು ತಿಳಿಸಿವೆ. ‘ಅನುಭಾಬ್’ ಕಾದಂಬರಿಗೆ ಪಾಲಿತ್ ಅವರು 1998ರಲ್ಲಿ ಸಾಹಿತ್ಯ ಅಕಾಡೆಮಿ ಗೌರವಕ್ಕೆ ಪಾತ್ರರಾಗಿದ್ದರು. ವಯೋ ಸಂಬಂಧಿ ಕಾಯಿಲೆಯಿಂದ ಅವರು ಕಳೆದ ಮೂರು ವರ್ಷಗಳಿಂದ ದಕ್ಷಿಣ ಕೋಲ್ಕೊತ್ತಾದಲ್ಲಿರುವ ತಮ್ಮ ನಿವಾಸದಲ್ಲೇ ಇದ್ದರು. ಆರೋಗ್ಯ ಸ್ಥಿತಿ ಕುಸಿದ ಬಳಿಕ ಬುಧವಾರ ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News