×
Ad

2000 ರೂ.ನೋಟುಗಳ ಮುದ್ರಣ ಸ್ಥಗಿತಗೊಳಿಸಿದ ಆರ್‌ಬಿಐ: ವರದಿ

Update: 2019-01-03 23:17 IST

ಹೊಸದಿಲ್ಲಿ,ಜ.3: 2000 ರೂ.ನೋಟುಗಳ ಮುದ್ರಣವನ್ನು ಆರ್‌ಬಿಐ ಸ್ಥಗಿತಗೊಳಿಸಿದೆ ಮತ್ತು ಇದು ನೋಟಿನ ಚಲಾವಣೆಯನ್ನು ಕ್ರಮೇಣ ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಅನಾಮಿಕ ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

2,000 ರೂ.ನೋಟುಗಳನ್ನು ಅಕ್ರಮ ಹಣ ವರ್ಗಾವಣೆ,ಕಾಳಧನ ಸಂಗ್ರಹ ಮತ್ತು ತೆರಿಗೆ ವಂಚನೆಗಾಗಿ ಬಳಸಲಾಗುತ್ತಿದೆ ಎಂಬ ಶಂಕೆಗಳ ನಡುವೆಯೇ ನೋಟು ಮುದ್ರಣವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದೂ ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News