×
Ad

ಗುರುವಿನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸಚಿನ್

Update: 2019-01-03 23:41 IST

ಮುಂಬೈ, ಜ.3: ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಅವರ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಬುಧವಾರ ನಿಧನರಾಗಿದ್ದು, ಅಂತ್ಯಕ್ರಿಯೆ ಗುರುವಾರ ಮುಂಬೈನ ದಾದರ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಚಿನ್ ತಮ್ಮ ಗುರುವಿನ ಪಾರ್ಥಿವ ಶರೀರ ಸಾಗಿಸುವಾಗ ಹೆಗಲು ಕೊಟ್ಟು ಕಂಬನಿ ಮಿಡಿದು ವಿದಾಯ ಹೇಳಿದರು.

ಸಚಿನ್ ಸೇರಿದಂತೆ ಹಲವು ಕ್ರಿಕೆಟಿಗರನ್ನು ರೂಪಿಸಿದ್ದ ಪದ್ಮಶ್ರೀ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ತರಬೇತುದಾರ ಅಚ್ರೇಕರ್ ಅವರ ಪಾರ್ಥಿವ ಶರೀರವನ್ನು ಶಿವಾಜಿ ಪಾರ್ಕ್‌ಗೆ ತಂದಾಗ ‘ ಅಚ್ರೇಕರ್ ಅಮರ್ ರಹೇ’ ಎಂಬ ಯುವಕರ ಕೂಗು ಮಾರ್ದನಿಸಿತು.

ಅಚ್ರೇಕರ್ ಅವರ ಗರಡಿಯಲ್ಲಿ ಪಳಗಿದ್ದ ಸಚಿನ್ ತೆಂಡುಲ್ಕರ್, ವಿನೋದ್ ಕಾಂಬ್ಳಿ, ಬಲ್ವಿಂದರ್ ಸಿಂಗ್ ಸಂಧು, ಚಂದ್ರಕಾಂತ್, ರಮೇಶ್ ಪೊವಾರ್, ರಣಜಿ ಕೋಚ್ ವಿನಾಯಕ್ ಸಾಮಂತ್ ಮತ್ತಿತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಅಚ್ರೇಕರ್ ಅವರ ಶಿಷ್ಯರಲ್ಲದೆ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಬಿಜೆಪಿ ಮುಖಂಡ ಆಶೀಸ್ ಶೆಲಾರ್, ಮುಂಬೈ ಮೇಯರ್ ವಿಶ್ವನಾಥ್ ಮಹದೇಶ್ವರ್ ಮುಂತಾದವರು ಅಗಲಿದ ಕ್ರಿಕೆಟ್ ಗುರುವಿಗೆ ಅಂತಿಮ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News