4ನೆ ಮಹಡಿಯಿಂದ ಬಿದ್ದು ಬದುಕುಳಿದ 14 ತಿಂಗಳ ಮಗು

Update: 2019-01-04 10:36 GMT

ಮುಂಬೈ, ಜ,4: ಕಟ್ಟಡವೊಂದರ ನಾಲ್ಕನೆ ಮಹಡಿಯಿಂದ ಕೆಳಕ್ಕೆ ಬಿದ್ದ 14 ತಿಂಗಳ ಮಗುವೊಂದು ಬದುಕುಳಿದ ಘಟನೆ ಮುಂಬೈಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಟವಾಡುತ್ತಿದ್ದ ಮಗು ಅಥರ್ವ ನಾಲ್ಕನೆ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದ. ಆದರೆ ಅದೃಷ್ಟವಶಾತ್ ಗೋಡೆಗೆ ತಾಗಿಕೊಂಡಿದ್ದ ಮರವೊಂದರ ರೆಂಬೆಗಳ ಮೇಲೆ ಆತ ಬಿದ್ದಿದ್ದು, ನೆಲಕ್ಕೆ ಬೀಳುವ ವೇಗವು ಕಡಿಮೆಯಾಗಿತ್ತು. ಮಗುವಿನ ತುಟಿ. ಕಾಲು ಮತ್ತು ಜಠರಕ್ಕೆ ಗಾಯಗಳಾಗಿವೆ.

“ಮಗುವನ್ನು ಐಸಿಯುನಲ್ಲಿ ಇರಿಸಲಾಗಿದೆ. ಇದೀಗ ಮಗುವಿನ ಆರೋಗ್ಯ ಸ್ಥಿತಿ ಕೊಂಚ ಸುಧಾರಿಸಿದೆ” ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News