ಸೈಕಲ್ ಗೆ ಢಿಕ್ಕಿ ಹೊಡೆದು ನಜ್ಜುಗುಜ್ಜಾದ ಕಾರು!: ಅಚ್ಚರಿಯ ಅಪಘಾತದ ವಿಡಿಯೋ ವೈರಲ್

Update: 2019-01-04 11:34 GMT

ಬೀಜಿಂಗ್, ಜ.4: ‘ಈ ಸೈಕಲ್ ಯಾವ ಅದ್ಭುತ ಲೋಹದಿಂದ ತಯಾರಿಸಲಾಗಿದೆ?’ ವೈರಲ್ ಆಗಿರುವ ಈ ಚಿತ್ರವನ್ನು ನೋಡಿ ಎಲ್ಲರೂ ಕೇಳುತ್ತಿರುವ ಪ್ರಶ್ನೆಯಿದು. ಚೀನಾದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಈ ಚಿತ್ರದಲ್ಲಿ ಕಾರು ಮತ್ತು ಸೈಕಲ್ ನಡುವಿನ ಅಪಘಾತದ ಚಿತ್ರಣವಿದು. ಇಲ್ಲಿ ಅಚ್ಚರಿಯೇನೆಂದರೆ ಇಂತಹ ಅಪಘಾತವಾದಾಗ ಸಹಜವಾಗಿ ಸೈಕಲ್ ನುಜ್ಜುಗುಜ್ಜಾಗಬೇಕಿತ್ತು, ಆದರೆ ವಿಪರ್ಯಾಸವೆಂದರೆ ಇಲ್ಲಿ ನುಜ್ಜುಗುಜ್ಜಾಗಿದ್ದು  ಕಾರು.

ಸೈಕಲ್ ಜತೆಗಿನ ಢಿಕ್ಕಿಯಲ್ಲಿ ಕಾರಿನ ಎದುರಿನ ಬೋನೆಟ್ ಸಂಪೂರ್ಣ ಹಾನಿಗೊಂಡಿದ್ದರೆ ಬೈಸಿಕಲ್ ಗೆ ಮಾತ್ರ ಏನೂ ಹಾನಿಯಾಗಿರಲಿಲ್ಲ. ಈ ಅಚ್ಚರಿ ಮೂಡಿಸಿದ ಅಪಘಾತ ನಡೆದಿದ್ದು ದಕ್ಷಿಣ ಚೀನಾದ ಶೆನ್ಝೆನ್ ಪಟ್ಟಣದಲ್ಲಿ.

ಈ ಚಿತ್ರ ಫೋಟೋಶಾಪ್ ಮಾಡಲ್ಪಟ್ಟಿದೆಯೇ ಎಂದು ಹಲವರು ಸಂಶಯಿಸಿದ್ದರೂ ಹಾಗೇನಿಲ್ಲ, ಇದು ನಿಜ ಘಟನೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ. ಘಟನೆಯ ವೀಡಿಯೋ ಕೂಡ ಬಿಡುಗಡೆ ಮಾಡಿರುವ ಪೊಲೀಸರು ಫೋಟೋ ಎಡಿಟ್ ಮಾಡಲಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳುಂಟಾಗದೇ ಇದ್ದರೂ ಸೈಕಲ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News