ಕೆನಡಾದಲ್ಲಿ ಬಾಲಿವುಡ್ ಹಿರಿಯ ನಟ ಖಾದರ್ ಖಾನ್ ಅಂತ್ಯಕ್ರಿಯೆ: ಫೋಟೊ, ವೀಡಿಯೋಗಳು

Update: 2019-01-04 13:49 GMT

ಕೆನಡಾ, ಜ.4: ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಹಿರಿಯ ಬಾಲಿವುಡ್ ನಟ ಖಾದರ್ ಖಾನ್ ಅವರ ಅಂತ್ಯಕ್ರಿಯೆ ಟೊರೊಂಟೋದ ಇಸ್ಲಾಮಿಕ್ ಧಫನ ಭೂಮಿಯಲ್ಲಿ ನಡೆಯಿತು. ಖಾನ್ ಅವರ ಅಂತ್ಯಕ್ರಿಯೆಯ ಹಲವಾರು ಫೋಟೋಗಳನ್ನು ಟೊರೊಂಟೋ ಮುಸ್ಲಿಮ್ಸ್ ಎಂಬ ಇನ್‍ಸ್ಟಾಗ್ರಾಂ ಹ್ಯಾಂಡಲ್ ಪೋಸ್ಟ್ ಮಾಡಿದೆ.

ಅಂತ್ಯಕ್ರಿಯೆಗೂ ಮುನ್ನ ಮಸೀದಿಯಲ್ಲಿ ಖಾದರ್ ಖಾನ್ ಅವರ ನೂರಾರು ಅಭಿಮಾನಿಗಳು ಹಾಗೂ ಸಂಬಂಧಿಗಳು ಹಾಜರಿದ್ದರು. ಜನಪ್ರಿಯ ನಟನ ಅಂತಿಮ ದರ್ಶನಕ್ಕೆ ಹಲವಾರು ಮಂದಿ ಥರಗುಟ್ಟುವ ಚಳಿಯಲ್ಲೂ ಕಾದು ನಿಂತಿದ್ದರು. ಈ ಸಂದರ್ಭ ಖಾದರ್ ಖಾನ್ ಅವರ ಪುತ್ರ ಸರ್ಫರಾಝ್ ಅವರ ದುಃಖದ ಕಟ್ಟೆಯೊಡೆದಿತ್ತು. ಅವರ ಸೊಸೆ ಶೈಸ್ತಾ ಮತ್ತು ಮೊಮ್ಮಕ್ಕಳು ಕೂಡ ಈ ಸಂದರ್ಭ ಹಾಜರಿದ್ದರು.

ನಟ ಹಾಗೂ ತನ್ನ ಆತ್ಮೀಯ ಸ್ನೇಹಿತ ಅಮಿತಾಭ್ ಬಚ್ಚನ್ ಅವರನ್ನು ಚಿತ್ರಗಳಲ್ಲಿ `ಸರ್’ ಎಂದು ಕರೆಯಲು ತಾನು ನಿರಾಕರಿಸಿದ್ದರಿಂದ ಹಲವು ಚಿತ್ರಗಳಲ್ಲಿ ಅವಕಾಶವನ್ನು ಕಳೆದುಕೊಳ್ಳಬೇಕಾದ ಬಗ್ಗೆ ಖಾನ್ ಹಿಂದೊಮ್ಮೆ ಹೇಳಿಕೊಂಡಿದ್ದ ವೀಡಿಯೋ ಅವರ ಮರಣಾನಂತರ ಸುದ್ದಿಯಾಗಿದೆ. ಆದರೆ ತಮ್ಮ ಕೊನೆಯ ದಿನಗಳಲ್ಲಿ ಖಾದರ್ ಖಾನ್ ಅವರು ಅಮಿತಾಭ್ ಅವರನ್ನು ಬಹಳಷ್ಟು ನೆನೆದುಕೊಂಡಿದ್ದರೆಂದು ಅವರ ಪುತ್ರ ಸರ್ಫರಾಝ್ ಹೇಳುತ್ತಾರೆ.

ಫೋಟೊ ಕೃಪೆ: torontomuslims

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News