ಕಂಪೆನಿಗಳ (ತಿದ್ದುಪಡಿ) ಕಾಯ್ದೆಗೆ ಲೋಕಸಭೆ ಅನುಮೋದನೆ

Update: 2019-01-04 17:20 GMT

ಹೊಸದಿಲ್ಲಿ, ಜ.4: ವ್ಯಾಪಾರ ಪ್ರಕ್ರಿಯೆಯನ್ನು ಸುಲಭಗೊಳಿಸುವ ಹಾಗೂ ಎನ್‌ಸಿಎಲ್‌ಟಿಯ ಅಡ್ಡಿಯನ್ನು ನಿವಾರಿಸುವ ಮತ್ತು ಕಾಯ್ದೆಯನ್ನು ಅನುಸರಿಸದ ಕಂಪೆನಿಗಳ ವಿರುದ್ಧ ಕಠಿಣ ಕ್ರಮಕ್ಕೆ ಅನುವು ಮಾಡಿಕೊಡುವ ಕಂಪೆನಿಗಳ(ತಿದ್ದುಪಡಿ) ಕಾಯ್ದೆ 2018ಕ್ಕೆ ಲೋಕಸಭೆ ಶುಕ್ರವಾರ ಅನುಮೋದನೆ ನೀಡಿದೆ.

ಕಾರ್ಪೊರೇಟ್ ವ್ಯವಹಾರಗಳ ಸಹಾಯಕ ಸಚಿವ ಚೌಧರಿ ತಿದ್ದುಪಡಿಗಳ ಸಹಿತ ಮಂಡಿಸಿದ ಮಸೂದೆಯನ್ನು ಲೋಕಸಭೆ ಧ್ವನಿಮತದ ಮೂಲಕ ಅನುಮೋದಿಸಿತು. ಈ ಮಸೂದೆಯು ವಿಶೇಷ ನ್ಯಾಯಾಲಯ ಮತ್ತು ರಾಷ್ಟ್ರೀಯ ಕಂಪೆನಿ ಕಾನೂನು ಟ್ರಿಬ್ಯೂನಲ್ (ಎನ್‌ಸಿಎಲ್‌ಟಿ)ಯ ಮೇಲಿರುವ ಹೊರೆಯನ್ನು ಕಡಿಮೆಗೊಳಿಸಲಿದೆ ಹಾಗೂ ದೇಶದಲ್ಲಿ ವ್ಯಾಪಾರ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸಂದರ್ಭ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಡಿ ಸದಸ್ಯ ತಥಾಗತ ಸತ್ಪಥಿ, ಮೋದಿ ಸರಕಾರ ತನ್ನ ನಾಲ್ಕೂವರೆ ವರ್ಷದ ಅಧಿಕಾರಾವಧಿಯಲ್ಲಿ ಕೇವಲ ವ್ಯಾಪಾರ ಕ್ಷೇತ್ರದತ್ತ ಮಾತ್ರ ಗಮನ ಹರಿಸಿದೆ ಎಂದು ಆರೋಪಿಸಿದರು. ಕಂಪೆನಿಗಳ(ತಿದ್ದುಪಡಿ) ಕಾಯ್ದೆ 2018 ಅನ್ನು ತರಾತುರಿಯಿಂದ ಮಂಡಿಸಿರುವುದು ಯಾವ ಕಾರಣಕ್ಕೆ. ಇದರಿಂದ ದೇಶಕ್ಕೆ ಅಥವಾ ಬಡಜನರಿಗೆ ಏನಾದರೂ ಪ್ರಯೋಜನವಾಗುತ್ತದೆಯೇ ಎಂದವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News