5 ವರ್ಷಗಳಲ್ಲಿ 27 ಆರ್ಥಿಕ ಅಪರಾಧಿಗಳು ದೇಶದಿಂದ ಪರಾರಿ!

Update: 2019-01-04 17:34 GMT

ಹೊಸದಿಲ್ಲಿ, ಜ. 4: ಕಳೆದ ಐದು ವರ್ಷಗಳಲ್ಲಿ 27 ಸುಸ್ತಿದಾರ ಉದ್ಯಮಿಗಳು ಹಾಗೂ ಆರ್ಥಿಕ ಅಪರಾಧಿಗಳು ದೇಶದಿಂದ ಪರಾರಿಯಾಗಿದ್ದಾರೆ ಎಂದು ಸಂಸತ್ತಿಗೆ ಶುಕ್ರವಾರ ಮಾಹಿತಿ ನೀಡಲಾಯಿತು.

ಈ 27 ಮಂದಿಯಲ್ಲಿ 20 ಮಂದಿಗೆ ರೆಡ್ ಕಾರ್ನರ್ ನೋಟಿಸು ಜಾರಿಗೊಳಿಸಲು ಇಂಟರ್‌ಪೋಲ್ ಅನ್ನು ಸಂಪರ್ಕಿಸಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ ಸಹಾಯಕ ಸಚಿವ ಶಿವ ಪ್ರತಾಪ್ ಶುಕ್ಲಾ ಲೋಕಸಭೆಯಲ್ಲಿ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ದೇಶದಿಂದ ಪರಾರಿಯಾಗಿರುವ 8 ಮಂದಿಯ ವಿರುದ್ಧ ಈಗಾಗಲೇ ರೆಡ್ ಕಾರ್ನರ್ ನೋಟಿಸು ಜಾರಿಗೊಳಿಸಲಾಗಿದೆ. 6 ಪ್ರಕರಣಗಳಲ್ಲಿ ಗಡಿಪಾರು ಕೋರಿಕೆ ರವಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಜಾರಿ ನಿರ್ದೇಶನಾಲಯದ ಮಾಹಿತಿಯಂತೆ 27 ಮಂದಿಯಲ್ಲಿ 7 ಮಂದಿಯ ವಿರುದ್ಧ ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಕಾಯ್ದೆ 2018ರ ಅಡಿ ಅರ್ಜಿ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News