ಡೆಲ್ಲಿ ಮೆಟ್ರೊ ಲಂಚ: ‘ಆ್ಯಲ್‌ಸ್ಟಮ್’ ಅಧಿಕಾರಿಗಳ ದೋಷಮುಕ್ತಿ

Update: 2019-01-05 16:40 GMT

ಲಂಡನ್, ಜ. 5: ಡೆಲ್ಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ)ದ ಒಂದನೆ ಹಂತದ ನಿರ್ಮಾಣದ ಗುತ್ತಿಗೆಗಳನ್ನು ಪಡೆಯುವುದಕ್ಕಾಗಿ ಅದರ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಎದುರಿಸುತ್ತಿದ್ದ ರೈಲು ಸಾರಿಗೆ ಕಂಪೆನಿ ‘ಆ್ಯಲ್‌ಸ್ಟಮ್’ನ ಇಬ್ಬರು ಮಾಜಿ ಅಧಿಕಾರಿಗಳನ್ನು ಬ್ರಿಟನ್‌ನ ನ್ಯಾಯಾಲಯವೊಂದು ದೋಷಮುಕ್ತಗೊಳಿಸಿದೆ.

ಸುಮಾರು 10 ವರ್ಷಗಳ ವಿಚಾರಣೆಯ ಬಳಿಕ ನ್ಯಾಯಾಲಯ ಈ ತೀರ್ಮಾನಕ್ಕೆ ಬಂದಿದೆ.

ಆ್ಯಲ್‌ಸ್ಟಮ್ ಸಮೂಹಕ್ಕೆ ಸೇರಿದ ಬ್ರಿಟನ್‌ನಲ್ಲಿರುವ ಕಂಪೆನಿಗಳು 2009ರಲ್ಲಿ ನೀಡಿವೆಯೆನ್ನಲಾದ ಲಂಚಗಳ ಕುರಿತ ವಿಸ್ತೃತ ತನಿಖೆಯ ಭಾಗವಾಗಿ, ಇಬ್ಬರು ಮಾಜಿ ಅಧಿಕಾರಿಗಳಾದ ಗ್ರಹಾಮ್ ಹಿಲ್ ಮತ್ತು ರಾಬರ್ಟ್ ಹ್ಯಾಲೆಟ್ ವಿರುದ್ಧ ದೋಷಾರೋಪಣೆ ಹೊರಿಸಲಾಗಿತ್ತು.

ಸ್ವಿಟ್ಸರ್‌ಲ್ಯಾಂಡ್‌ನ ಅಟಾರ್ನಿ ಜನರಲ್ ಕಚೇರಿ ನೀಡಿದ ಮಾಹಿತಿಯಂತೆ ಬ್ರಿಟನ್‌ನ ಸೀರಿಯಸ್ ಫ್ರಾಡ್ ಕಚೇರಿ (ಎಸ್‌ಎಫ್‌ಒ) ಈ ಮೊಕದ್ದಮೆ ಹೂಡಿತ್ತು.

ಡಿಎಂಆರ್‌ಸಿ ಪ್ರಕರಣದಲ್ಲಿ ನ್ಯಾಯಾಲಯವು ಈ ಇಬ್ಬರನ್ನು ಈಗ ಬಿಡುಗಡೆ ಮಾಡಿದೆ. ಆದರೆ, ಇತರ ಯೋಜನೆಗಳಿಗೆ ಸಂಬಂಧಿಸಿ, ಇತರ ಐವರು ಮತ್ತು ಆ್ಯಲ್‌ಸ್ಟಮ್ ಕಂಪೆನಿ ದೋಷಿ ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News