ಇರಾನ್ ತೈಲಕ್ಕೆ ಹೊಸ ಗ್ರಾಹಕರು: ತೈಲ ಸಚಿವ ಅಮೀರ್ ಹುಸೈನ್ ಝಮಾನಿನಿಯ

Update: 2019-01-05 16:43 GMT

ಲಂಡನ್, ಜ. 5: ಇರಾನ್‌ನಿಂದ ತೈಲ ಖರೀದಿಸಲು ಅಮೆರಿಕದಿಂದ ರಿಯಾಯಿತಿ ಪಡೆದಿರುವ ಎಲ್ಲ ದೇಶಗಳು ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನಗಳ ಶರತ್ತುಗಳನ್ನು ಪಾಲಿಸುತ್ತಿವೆ ಎಂದು ಇರಾನ್‌ನ ಹಿರಿಯ ಇಂಧನ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅದೇ ವೇಳೆ, ಹೊಸ ಗ್ರಾಹಕರನ್ನು ಕಂಡುಹಿಡಿಯುವ ಬಗ್ಗೆಯೂ ಇರಾನ್ ಆಶಾಭಾವ ಹೊಂದಿದೆ ಎಂದು ದೇಶದ ಉಪ ತೈಲ ಸಚಿವ ಅಮೀರ್ ಹುಸೈನ್ ಝಮಾನಿನಿಯ ಹೇಳಿರುವುದಾಗಿ ತೈಲ ಸಚಿವಾಲಯದ ಸುದ್ದಿ ಸಂಸ್ಥೆ ‘ಎಸ್‌ಎಚ್‌ಎಎನ್‌ಎ’ ತಿಳಿಸಿದೆ.

ಆದಾಗ್ಯೂ, ಅವರು ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

‘‘ಇರಾನ್ ತೈಲ ಮಾರುಕಟ್ಟೆಯ ಮೇಲಿನ ಅಮೆರಿಕದ ಒತ್ತಡದ ಹೊರತಾಗಿಯೂ, ಇರಾನ್ ತೈಲದ ಸಂಭಾವ್ಯ ಖರೀದಿದಾರರ ಸಂಖ್ಯೆ ಹೆಚ್ಚುತ್ತಿದೆ’’ ಎಂದು ಅಮೀರ್ ಹುಸೈನ್ ಝಮಾನಿನಿಯ ಹೇಳಿದರು.

ತೈಲ ಖರೀದಿಗಾಗಿ 180 ದಿನಗಳ ವಿನಾಯಿತಿಯನ್ನು ಅಮೆರಿಕವು ಭಾರತ, ಇಟಲಿ, ಗ್ರೀಸ್, ತೈವಾನ್ ಮತ್ತು ಟರ್ಕಿ ದೇಶಗಳಿಗೆ ನೀಡಿರುವುದನ್ನು ಸ್ಮರಿಸಬಹುದಾಗಿದೆ.

ಕ್ಷಿಪಣಿ ಮತ್ತು ಪರಮಾಣು ಕಾರ್ಯಕ್ರಮಗಳಿಂದ ಇರಾನ್ ಹಿಮ್ಮೆಟ್ಟುವಂತೆ ಮಾಡಲು ಅದರ ಮೇಲೆ ಅಮೆರಿಕ ನವೆಂಬರ್‌ನಿಂದ ಜಾರಿಗೆ ಬರುವಂತೆ ಆರ್ಥಿಕ ದಿಗ್ಬಂಧನ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ. ಇರಾನ್‌ನ ತೈಲ ರಫ್ತನ್ನು ಶೂನ್ಯಕ್ಕೆ ತರುವುದು ದಿಗ್ಬಂಧನದ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News