ಪೆರೇರ ಅಬ್ಬರದ ಶತಕ ವ್ಯರ್ಥ: ಕಿವೀಸ್‌ಗೆ ಸರಣಿ

Update: 2019-01-05 18:27 GMT

ಮೌಂಟ್ ಮೌಂಗಾನ್ಯೂ (ನ್ಯೂಝಿಲೆಂಡ್), ಜ.5: ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಝಿಲೆಂಡ್ 2-0 ಅಂತರದಿಂದ ಗೆದ್ದು ಬೀಗಿದೆ. ಇಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ತಿಸಾರ ಪೆರೇರ ಅಬ್ಬರದ ಶತಕ ಬಾರಿಸಿ ಬೀಗಿದರೂ ಶ್ರೀಲಂಕಾ, ನ್ಯೂಝಿಲೆಂಡ್ ಎದುರು 21 ರನ್ ವೀರೋಚಿತ ಸೋಲು ಅನುಭವಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಝಿಲೆಂಡ್‌ಗೆ ಆರಂಭದಲ್ಲೇ ಲಂಕಾ ಬೌಲರ್‌ಗಳು ಆಘಾತ ನೀಡಿದರು. 39 ರನ್‌ಗಳಾಗುವಷ್ಟರಲ್ಲಿ ಮೊದಲ ಪಂದ್ಯದ ಶತಕವೀರ ಮಾರ್ಟಿನ್ ಗಪ್ಟಿಲ್ ಹಾಗೂ ಕೇನ್ ವಿಲಿಯಮ್ಸನ್ ಪೆವಿಲಿಯನ್ ಸೇರಿದರು. ಶತಕ ವಂಚಿತ ರಾಸ್ ಟೇಲರ್(90), ಕಾಲಿನ್ ಮುನ್ರೊ(87) 3ನೇ ವಿಕೆಟ್‌ಗೆ 112 ರನ್‌ಗಳ ಜೊತೆಯಾಟ ನೀಡಿ ಕಿವೀಸ್ ಇನಿಂಗ್ಸ್‌ಗೆ ಭರ್ಜರಿ ಚೇತರಿಕೆ ನೀಡಿದರು. ಜೇಮ್ಸ್ ನೀಶಾಮ್ ಮತ್ತೊಮ್ಮೆ ಆಕ್ರಮಣಕಾರಿಯಾಗಿ(64, 37 ಎಸೆತ) ಮೂಡಿಬಂದರು. ಅಂತಿಮವಾಗಿ ನ್ಯೂಝಿಲೆಂಡ್ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 319ರನ್‌ಗಳ ಬೃಹತ್ ಮೊತ್ತ ಜಮೆ ಮಾಡಿತು.

ಶ್ರೀಲಂಕಾ ಪರ ವೇಗಿ ಲಸಿತ್ ಮಾಲಿಂಗ 45ರನ್‌ಗೆ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

ಕಿವೀಸ್‌ನ ಬೃಹತ್ ಮೊತ್ತವನ್ನು ಬೆನ್ನಟ್ಟಿದ ದ್ವೀಪರಾಷ್ಟ್ರದ ತಂಡಕ್ಕೆ ಆರಂಭಿಕ ದಾಂಡಿಗ ಧನುಷ್ಕ ಗುಣತಿಲಕ (71) ಉತ್ತಮ ಆರಂಭ ಒದಗಿಸಿದರು. ಒಂದು ಹಂತದಲ್ಲಿ 112ಕ್ಕೆ 2 ವಿಕೆಟ್ ಕಳೆದುಕೊಂಡು ಗೆಲುವಿನ ರೇಖೆಯೆಡೆಗೆ ದಿಟ್ಟವಾಗಿ ಸಾಗುತ್ತಿದ್ದ ಲಂಕಾಗೆ ನ್ಯೂಝಿಲೆಂಡ್ ಬೌಲರ್‌ಗಳು ದಿಢೀರ್ ಕಡಿವಾಣ ಹಾಕಿದರು. 128 ರನ್‌ಗಳಾಗುವಷ್ಟರಲ್ಲಿ ಲಂಕಾದ 7 ವಿಕೆಟ್ ಉರುಳಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News