ರಾಬರ್ಟೊ ಬೌಟಿಸ್ಟಾ ಚಾಂಪಿಯನ್
Update: 2019-01-06 23:35 IST
ದೋಹಾ,ಜ.6: ಖತರ್ ಓಪನ್ ಟೆನಿಸ್ ಟೂರ್ನಿಯಲ್ಲಿ ಝೆಕ್‌ನ ಥಾಮಸ್ ಬೆರ್ಡಿಕ್‌ರನ್ನು ಮಣಿಸಿದ ಸ್ಪೇನ್‌ನ ರಾಬರ್ಟೊ ಬೌಟಿಸ್ಟಾ ಅಗುಟ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇಲ್ಲಿ ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ನ ಫೈನಲ್ ಪಂದ್ಯದಲ್ಲಿ 24ನೇ ರ್ಯಾಂಕಿನ ಅಗುಟ್ ಅವರು ಬೆರ್ಡಿಕ್‌ರನ್ನು 6-4, 3-6, 6-3 ಅಂತರದಿಂದ ಮಣಿಸಿದರು. ಸೆಮಿ ಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್‌ರನ್ನು ಮಣಿಸಿ ಆತ್ಮವಿಶ್ವಾಸವನ್ನು ಹೆಚ್ಚಿ ಸಿಕೊಂಡಿದ್ದ ಅಗುಟ್ ದೋಹಾದಲ್ಲಿ ಪ್ರಥಮ ಹಾಗೂ ವೃತ್ತಿಜೀವನದ 9ನೇ ಪ್ರಶಸ್ತಿ ಗೆದ್ದುಕೊಂಡರು. ಬೌಟಿಸ್ಟಾ ಅಗುಟ್ ಪ್ರಶಸ್ತಿ ಹಾದಿಯಲ್ಲಿ ಎಟಿಪಿ ರ್ಯಾಂಕಿಂಗ್‌ನಲ್ಲಿ ಅಗ್ರ ಐದರಲ್ಲಿರುವ ಸ್ಟಾನ್ ವಾವ್ರಿಂಕ, ಜೊಕೊವಿಕ್ ಹಾಗೂ ಇದೀಗ ಬೆರ್ಡಿಕ್‌ರನ್ನು ಸೋಲಿಸಿದ್ದಾರೆ.