×
Ad

ಲೋಕಸಭೆ ಕಲಾಪಕ್ಕೆ ಚಾಟಿ ಹಿಡಿದುಕೊಂಡು ಬಂದ ಎಂಜಿಆರ್ !

Update: 2019-01-07 22:28 IST

ಹೊಸದಿಲ್ಲಿ, ಜ. 7: ವಿವಿಧ ವೇಷಗಳನ್ನು ಹಾಕಿ ಸದನಕ್ಕೆ ಬರುವ ನಾರಮಲ್ಲಿ ಶಿವಪ್ರಸಾದ್ ಸೋಮವಾರ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ವೇಷ ಧರಿಸಿ ಲೋಕಸಭೆಯ ಕಲಾಪಕ್ಕೆ ಆಗಮಿಸಿದರು. ಅವರು ಕೈಯಲ್ಲಿ ಚಾಟಿ ಹಿಡಿದುಕೊಂಡಿದ್ದರು.

ಕಲಾಪಕ್ಕೆ ನಿರಂತರ ಅಡ್ಡಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಶೂನ್ಯ ವೇಳೆಯಲ್ಲಿ ಮೂವರು ಇತರ ಸದಸ್ಯರೊಂದಿಗೆ ಅವರನ್ನು ಅಮಾನತುಗೊಳಿಸಲಾಯಿತು. ಪ್ರಶ್ನೋತ್ತರ ವೇಳೆಯಲ್ಲಿ ಶಿವಪ್ರಸಾದ್ ಅವರು ಸದನದ ಬಾವಿಗೆ ಇಳಿದರು ಹಾಗೂ ಚಾಟಿಯಿಂದ ಸ್ವಯಂ ಹೊಡೆದುಕೊಂಡರು. ಇತರ ಪಕ್ಷಗಳು ಕೂಡ ಪ್ರತಿಭಟನೆ ನಡೆಸಿದಾಗ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಅಪರಾಹ್ನಕ್ಕೆ ಮುಂದೂಡಿದರು. ಸ್ಪೀಕರ್ ಕಲಾಪವನ್ನು ಮುಂದೂಡಿದ ಸಂದರ್ಭ ಶಿವಪ್ರಸಾದ್ ಅಡಿಯೋದ ಸ್ವಿಚ್ ಆನ್ ಮಾಡಿದರು. ಆಗ ಎಂಜಿಆರ್ ನಟಿಸಿದ ತಮಿಳು ಚಿತ್ರವೊಂದರ ಗೀತೆ ತೇಲಿ ಬಂತು.

 ಸದನ ಮುಂದೂಡಿದ ಬಳಿಕ ಕೆಲವು ಸದಸ್ಯರು ಶಿವಪ್ರಸಾದ್ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿದರು. ಈ ಸಂದರ್ಭ ಬಿಜೆಪಿ ಸದಸ್ಯ ಅನುರಾಗ್ ಠಾಕೂರ್ ಆಡಿಯೊ ಪ್ಲೇಯರ್ ಅನ್ನು ಸ್ವಿಚ್ ಆಫ್ ಮಾಡಿದರು. ಕಲಾಪವನ್ನು 12.30ಕ್ಕೆ ಮುಂದೂಡಿದ ಬಳಿಕ ಶಿವಪ್ರಸಾದ್ ಅವರು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಹಾಗೂ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿದರು. ಟಿಡಿಪಿ ಸದಸ್ಯರ ವರ್ತನೆ ಬಿಜೆಪಿಯ ಕೆಲವು ಹಿರಿಯ ಸದಸ್ಯರಿಗೆ ಕಿರಿಕಿರಿ ಉಂಟು ಮಾಡಿತು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಟಿಡಿಪಿ ಸದಸ್ಯರು ಆಗ್ರಹಿಸಿದರು. ಅಸಿಸ್ತಿನ ನಡವಳಿಕೆಯ ಕಾರಣಕ್ಕೆ ಕಳೆದ ವಾರ ಟಿಡಿಪಿ ಹಲವು ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News