ಮಹಿಳಾ ಕಾಂಗ್ರೆಸ್ ನ ರಾಷ್ಟ್ರೀಯ ಪ್ರ.ಕಾರ್ಯದರ್ಶಿಯಾಗಿ ತೃತೀಯಲಿಂಗಿ ಅಪ್ಸರಾ ರೆಡ್ಡಿ
Update: 2019-01-08 21:55 IST
ಹೊಸದಿಲ್ಲಿ, ಜ. 8: ಕಾಂಗ್ರೆಸ್ ತನ್ನ ಮಹಿಳಾ ಘಟಕವಾದ ಮಹಿಳಾ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ತೃತೀಯ ಲಿಂಗಿ ಹೋರಾಟಗಾರ್ತಿ ಅಪ್ಸರಾ ರೆಡ್ಡಿ ಅವರನ್ನು ನೇಮಕ ಮಾಡಿದೆ.
ಪಕ್ಷದ 134 ವರ್ಷ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರನ್ನು ಪದಾಧಿಕಾರಿಯನ್ನಾಗಿ ನಿಯೋಜಿಸುತ್ತಿದೆ. ರಾಹುಲ್ ಗಾಂಧಿ ಅವರೊಂದಿಗೆ ಅಪ್ಸರಾ ರೆಡ್ಡಿ ಇರುವ ಫೊಟೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ. ಮಾಜಿ ಪತ್ರಕರ್ತೆ ಅಪ್ಸರಾ ರೆಡ್ಡಿ ಅವರು 2016ರಲ್ಲಿ ಎಐಎಡಿಎಂಕೆಗೆ ಸೇರಿದ್ದರು. ಕಳೆದ ವರ್ಷ ಜಯಲಲಿತಾ ಅವರು ನಿಧನರಾದ ಬಳಿಕ ಅವರು ಎಐಎಡಿಎಂಕೆಯ ಶಶಿಕಲಾ ಪರ ಬಣಕ್ಕೆ ಸೇರಿದ್ದರು.