ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ಮಸೂದೆ ಅಂಗೀಕಾರ

Update: 2019-01-08 16:36 GMT

ಹೊಸದಿಲ್ಲಿ, ಜ. 8: ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವ ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆ 2016ಕ್ಕೆ ಬಿಜೆಪಿ ಮಿತ್ರ ಪಕ್ಷಗಳು ಹಾಗೂ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ನಡುವೆಯೂ ಮಂಗಳವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿತು.

ಮಸೂದೆ ಮಂಡಿಸಿ ಮಾತನಾಡಿ ಗೃಹ ಸಚಿವ ರಾಜನಾಥ್ ಸಿಂಗ್, ಕಳೆದ ಧಾರ್ಮಿಕ ಅಲ್ಪಸಂಖ್ಯಾತರಾದ ಕಾರಣಕ್ಕೆ ಕಳೆದ ಮೂರು ದಶಕಗಳಿಗಂದ ಕಿರುಕುಳ ೆಎದುರಿಸುತ್ತಿರುವ ಹಿಂದೂಗಳು, ಜೈನರು, ಕ್ರಿಶ್ಚಿಯನ್ನರು, ಸಿಕ್ಖರು ಹಾಗೂ ಬೌದ್ಧರಿಗೆ ಭಾರತದ ಪೌರತ್ವ ನೀಡಲು ಈ ಮಸೂದೆ ದಾರಿಯಾಗಲಿದೆ ಎಂದರು. ಭಾರತ ಹೊರತುಪಡಿಸಿ ಅವರಿಗೆ ಬೇರೆ ಸ್ಥಳ ಇಲ್ಲ ಎಂದು ಹೇಳಿದ ಅವರು, ನೆರೆಯ ರಾಷ್ಟ್ರಗಳಲ್ಲಿ ಕಿರುಕುಳ ಅನುಭವಿಸುತ್ತಿರುವ ಅಲ್ಪಸಂಖ್ಯಾತರಿಗೆ ಆಶ್ರಯ ನೀಡಲು ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರೂ ಸೇರಿದಂತೆ ಹಲವು ನಾಯಕರು ಒಲವು ಹೊಂದಿದ್ದರು ಎಂದರು.

ಮಸೂದೆ ವಿರುದ್ಧ ಮಂಗಳವಾರ ಬಂದ್‌ ಗೆ ಸಾಕ್ಷಿಯಾಗಿರುವ ಈಶಾನ್ಯ ಕಳವಳಪಡುವ ಅಗತ್ಯತೆ ಇಲ್ಲ ಎಂದು ಹೇಳಿದ ಸಿಂಗ್, ಮಸೂದೆ ಅಸ್ಸಾಂಗೆ ಮಾತ್ರ ಸೀಮಿತಗೊಂಡಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News