ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾರಾಯಿ ವಿತರಿಸಿದ ಬಿಜೆಪಿ ನಾಯಕ

Update: 2019-01-08 17:25 GMT

 ಕಾನ್ಪುರ, ಜ. 8: ಇಲ್ಲಿನ ಹಾರ್ಡೋಯಿಯಲ್ಲಿರುವ ಶ್ರಾವಣ ದೇವಿ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಪಸಿ ಸಮ್ಮೇಳನಕ್ಕೆ ಆಗಮಿಸಿದ ಜನರಿಗೆ ವಿತರಿಸಿದ ಊಟದ ಪ್ಯಾಕೆಟ್‌ನಲ್ಲಿ 200 ಮಿ. ಲೀ.ನ ಸಾರಾಯಿ ಬಾಟಲಿ ಇರುವ ಎರಡು ವೀಡಿಯೊ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಉತ್ತರಪ್ರದೇಶದ ಮಾಜಿ ಸಚಿವ ನರೇಶ್ ಅಗರ್ವಾಲ್ ಹಾಗೂ ಅವರ ಪುತ್ರ ನಿತಿನ್ ಅಗರ್‌ವಾಲ್ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಈ ಎರಡು ವೀಡಿಯೊಗಳು ಸೋಮವಾರ ವ್ಯಾಪಕವಾಗಿ ಶೇರ್ ಆಗಿವೆ. ಒಂದು ವೀಡಿಯೊದಲ್ಲಿ ಮಕ್ಕಳು ಊಟದ ಪ್ಯಾಕೇಟ್‌ನಲ್ಲಿ ಸಾರಾಯಿ ಬಾಟಲಿ ಇರಿಸುತ್ತಿರುವುದು ಹಾಗೂ ಇನ್ನೊಂದು ವೀಡಿಯೊದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ವ್ಯಕ್ತಿಯೋರ್ವ ಊಟದ ಪ್ಯಾಕೇಟ್‌ನಲ್ಲಿ ಸಾರಾಯಿ ಬಾಟಲಿ ಇರುವುದನ್ನು ಪತ್ತೆ ಮಾಡಿರುವುದು ದಾಖಲಾಗಿದೆ. ಈ ವಿವಾದದ ಹಿನ್ನೆಲೆಯಲ್ಲಿ ಹರ್ಡೋಯಿಯ ಬಿಜೆಪಿ ಸಂಸದ ಅಂಶುಲ್ ವರ್ಮಾ ಸೋಮವಾರ ಮುಖ್ಯಮಂತ್ರಿ ಆದಿತ್ಯನಾಥ್ ಗೆ ಪತ್ರ ಬರೆದಿದ್ದಾರೆ ಹಾಗೂ ಅಗರ್ವಾಲ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳವಂತೆ ಆಗ್ರಹಿಸಿದ್ದಾರೆ.

‘‘ನರೇಶ್‌ಜಿ ಅವರು ಪಸಿ ಸಮದಾಯಕ್ಕೆ ಅವಮಾನ ಮಾಡಿದ್ದಾರೆ ಹಾಗೂ ಸಾರಾಯಿ ವಿತರಿಸಿ ದೇವಾಲಯದ ಘನತೆಗೆ ಧಕ್ಕೆ ತಂದಿದ್ದಾರೆ’’ ಎಂದು ಅವರು ಹೇಳಿದ್ದಾರೆ. ಸಮ್ಮೇಳವನ್ನು ಹರ್ಡೋಯಿಯ ಶ್ರವಣ್ ದೇವಿ ದೇವಾಲಯದಲ್ಲಿ ರವಿವಾರ ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ಹರ್ಡೋಯಿ ಹಾಗೂ ಗ್ರಾಮಗಳ ಪಸಿ ಸಮುದಾಯದ ಜನರು ಭಾಗವಹಿಸಿದ್ದರು. ಬಾಕ್ಸ್

ಮಾಜಿ ರಾಜ್ಯ ಸಭಾ ಸದಸ್ಯರಾಗಿರುವ ನರೇಶ್ ಅಗರ್ವಾಲ್ 2018ರಲ್ಲಿ ಸಮಾಜವಾದಿ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹರ್ಡೋಯಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಮೂಲಕ ಸ್ಪರ್ಧಿಸಲು ಅವರ ಸಿದ್ಧತೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಹರ್ಡೋಯಿಯಲ್ಲಿ ಪ್ರಬಲವಾಗಿರುವ ಪಸಿ ಸಮುದಾಯವನ್ನು ಸಂತುಷ್ಟಿಪಡಿಸಲು ಈ ಕ್ರಮ ಕೈಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News