ಭಾರತದಲ್ಲೇ ನಡೆಯಲಿದೆ ಐಪಿಎಲ್; ಮಾ.23ಕ್ಕೆ ಆರಂಭ: ಬಿಸಿಸಿಐ
ಹೊಸದಿಲ್ಲಿ, ಜ.8: 11ನೇ ಆವೃತ್ತಿಯ ಐಪಿಎಲ್‌ನ ಸಂಪೂರ್ಣ ಪಂದ್ಯಗಳು ಭಾರತದಲ್ಲೇ ನಡೆಯಲಿವೆೆ. ಟೂರ್ನಿಯು ಮಾ.23ಕ್ಕೆ ಆರಂಭವಾಗಲಿದೆ ಎಂದು ಬಿಸಿಸಿಐ ಮಂಗಳವಾರ ತಿಳಿಸಿದೆ.
ಐಪಿಎಲ್ ಹಾಗೂ ಲೋಕಸಭಾ ಚುನಾವಣೆಯ ದಿನಾಂಕಗಳ ತಿಕ್ಕಾಟದ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿ ದೇಶದಿಂದ ಹೊರಗೆ ಸ್ಥಳಾಂತರವಾಗಲಿದೆ ಎಂಬ ಮಾತು ಕೇಳಿಬಂದಿತ್ತು. ಐಪಿಎಲ್ ಪ್ರತಿ ವರ್ಷ ಎಪ್ರಿಲ್-ಮೇನಲ್ಲಿ ನಡೆಯುತ್ತದೆ. ಒಕ್ಕೂಟ ಹಾಗೂ ರಾಜ್ಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಆಡಳಿತಾಧಿಕಾರಿಗಳ ಸಮಿತಿಯು ಐಪಿಎಲ್‌ನ ದಿನಾಂಕ ಹಾಗೂ ಸ್ಥಳದ ಕುರಿತು ನಿರ್ಣಯಿಸಲಿದೆ ಎಂದು ಬಿಸಿಸಿಐ ತಿಳಿಸಿದೆ.
2009 ಹಾಗೂ 2014ರಲ್ಲಿ ಐಪಿಎಲ್ ಟೂರ್ನಿ ಹಾಗೂ ಲೋಕಸಭಾ ಚುನಾವಣೆ ದಿನಾಂಕದಲ್ಲಿ ಘರ್ಷಣೆಯಾಗಿತ್ತು. ಆಗ ಐಪಿಎಲ್‌ನ್ನು ಕ್ರಮವಾಗಿ ದಕ್ಷಿಣ ಆಫ್ರಿಕ ಹಾಗೂ ಯುಎಇಗೆ(ಐಪಿಎಲ್‌ನ ಮೊದಲ ಹಂತ)ಸ್ಥಳಾಂತರಿಸಲಾಗಿತ್ತು. ಈ ವರ್ಷ ಕೂಡ ಐಪಿಎಲ್‌ಗೆ ಪರ್ಯಾಯ ಸ್ಥಳ ನಿಗದಿಯಾಗಬೇಕಾಗಿದೆ. ಇಡೀ ಟೂರ್ನಿ ಭಾರತದಲ್ಲೇ ನಡೆಸಲು ಮೊದಲ ಆದ್ಯತೆ ನೀಡಲಾಗುತ್ತಿದೆ. ಪರ್ಯಾಯ ಸ್ಥಳಗಳ ಅಂತಿಮ ಪಟ್ಟಿಯಲ್ಲಿ ದ.ಆಫ್ರಿಕ ಹಾಗೂ ಯುಎಇಗೆ ಸ್ಥಾನ ನೀಡಲಾಗಿದೆ.