×
Ad

‘ಆಫ್ರಿಕ ಕಪ್ ಆಫ್ ನೇಶನ್ಸ್’ ಟೂರ್ನಿಗೆ ಈಜಿಪ್ಟ್‌ ಆತಿಥ್ಯ

Update: 2019-01-08 23:52 IST

ಕೈರೋ, ಜ.8: ಜೂನ್ ಹಾಗೂ ಜುಲೈನಲ್ಲಿ ನಡೆಯಲಿರುವ ‘‘ಆಫ್ರಿಕ ಕಪ್ ಆಫ್ ನೇಶನ್ಸ್’’ ಫುಟ್ಬಾಲ್ ಟೂರ್ನಿಗೆ ಕ್ಯಾಮರೂನ್ ದೇಶದ ಬದಲಿಗೆ ಈಜಿಪ್ಟ್ ಆತಿಥ್ಯ ವಹಿಸಲಿದೆ. ಇದು ಈಜಿಪ್ಟ್‌ನ ಫುಟ್ಬಾಲ್ ತಾರೆ ಮುಹಮ್ಮದ್ ಸಲಾಹ್‌ಗೆ ತವರಿನಲ್ಲಿ ಮಿಂಚಲು ಉತ್ತಮ ಅವಕಾಶ ಕಲ್ಪಿಸಲಿದೆ.

ನಿಸ್ಸಂಶಯವಾಗಿ ಸಲಾಹ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಲಿದ್ದರೂ, ಟೂರ್ನಿಯನ್ನು ಆಯೋಜಿಸಲು ಇನ್ನು 5 ತಿಂಗಳು ಮಾತ್ರ ಬಾಕಿ ಇರುವುದರಿಂದ ಈಜಿಪ್ಟ್‌ನ ಸಂಘಟಕರಿಗೆ ಸಿದ್ಧತೆ ಕೈಗೊಳ್ಳುವುದು ಸವಾಲಾಗಿ ಪರಿಣಮಿಸಿದೆ. ತಂಡಗಳ ಸಂಖ್ಯೆಯನ್ನು 16ರಿಂದ 24ಕ್ಕೆ ಹೆಚ್ಚಿಸಿ ಆಡಿಸುತ್ತಿರುವ ಪ್ರಥಮ ಆಫ್ರಿಕನ್ ಚಾಂಪಿಯನ್‌ಶಿಪ್ ಇದಾಗಲಿದೆ.

2011ರಲ್ಲಿ ಕ್ರಾಂತಿ ಹಾಗೂ ಅಧ್ಯಕ್ಷ ಹೋಸ್ನಿ ಮುಬಾರಕ್‌ರನ್ನು ಹುದ್ದೆಯಿಂದ ಪದಚ್ಯುತಿಗೊಳಿಸಿದ ನಂತರ ಈಜಿಪ್ಟ್ ಅಹಿತಕರ ರಾಜಕೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಈ ಕಾಲಘಟ್ಟದಲ್ಲಿ ಫುಟ್ಬಾಲ್ ಟೂರ್ನಿಯ ಆತಿಥ್ಯ ಒದಗಿಬಂದಿದ್ದು, ಸಂಘಟಕರಿಗೆ ದೊಡ್ಡ ಸವಾಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News