ವಿರಾಟ್ ಕೊಹ್ಲಿ ಬಳಗಕ್ಕೆ ಇಮ್ರಾನ್ ಅಭಿನಂದನೆ
Update: 2019-01-08 23:53 IST
ಇಸ್ಲಾಮಾಬಾದ್, ಜ.8: ಪಾಕಿಸ್ತಾನ ಪ್ರಧಾನಿ ಹಾಗೂ ಮಾಜಿ ಕ್ರಿಕೆಟ್ ನಾಯಕ ಇಮ್ರಾನ್ ಖಾನ್, ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಜಯಿಸಿದ ಏಶ್ಯದ ಮೊದಲ ತಂಡ ಎನಿಸಿಕೊಂಡಿರುವ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
‘‘ಆಸ್ಟ್ರೇಲಿಯದಲ್ಲಿ ಟೆಸ್ಟ್ ಸರಣಿ ಜಯಿಸಿದ ಉಪಖಂಡದ ಮೊದಲ ತಂಡವಾಗಿರುವ ವಿರಾಟ್ ಕೊಹ್ಲಿ ನೇತೃತ್ವದ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು’’ ಎಂದು ಖಾನ್ ಟ್ವೀಟ್ ಮಾಡಿದ್ದಾರೆ. ಖಾನ್ 1992ರಲ್ಲಿ ಆಸ್ಟ್ರೇಲಿಯದಲ್ಲಿ ಪಾಕ್ ಏಕೈಕ ವಿಶ್ವಕಪ್ ಟ್ರೋಫಿ ಜಯಿಸಲು ನೇತೃತ್ವವಹಿಸಿದ್ದರು. ಪಾಕ್ ಪರ ಇಮ್ರಾನ್ 88 ಟೆಸ್ಟ್ ಹಾಗೂ 175 ಏಕದಿನ ಪಂದ್ಯಗಳನ್ನಾಡಿದ್ದಾರೆ.