×
Ad

ಕೆರ್ಬರ್ ಕ್ವಾ. ಫೈನಲ್‌ಗೆ

Update: 2019-01-08 23:57 IST

ಸಿಡ್ನಿ,ಜ.8: ಹಾಲಿ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಕಮಿಲಾ ಗಿಯೊರ್ಗಿ ಅವರನ್ನು 7-6(3), 6-2 ಅಂತರದಿಂದ ಮಣಿಸಿದರು.

ಅಮೆರಿಕದ ಆಟಗಾರ್ತಿ ಸ್ಲೋಯಾನೆ ಸ್ಟೀಫನ್ಸ್ ರಶ್ಯದ ಎಕಟೆರಿನಾ ಅಲೆಕ್ಸಾಂಡ್ರೊರನ್ನು 0-6, 7-6(3), 7-6(3)ಸೋಲಿಸಿ ಈ ಋತುವಿನಲ್ಲಿ ಮೊದಲ ಜಯ ದಾಖಲಿಸಿದರು. ಇದೇ ವೇಳೆ, 2017ರ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊರನ್ನು ಮಣಿಸಿದ ಅಶ್ ಬಾರ್ಟಿ 2ನೇ ಸುತ್ತಿಗೆ ತಲುಪಿದರು. ಮುಂದಿನ ಸುತ್ತಿನಲ್ಲಿ ನಂ.1 ಆಟಗಾರ್ತಿ ಸಿಮೊನಾ ಹಾಲೆಪ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News