×
Ad

ಎಲ್ಲ ಮಾದರಿಯ ಕ್ರಿಕೆಟ್‌ನಿಂದ ಅಲ್ಬಿಮೊರ್ಕೆಲ್ ನಿವೃತ್ತಿ

Update: 2019-01-09 23:52 IST

ಜೋಹಾನ್ಸ್‌ಬರ್ಗ್, ಜ.9: ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ಆಲ್‌ರೌಂಡರ್ ಅಲ್ಬಿ ಮೊರ್ಕೆಲ್ ಬುಧವಾರ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ 20 ವರ್ಷಗಳ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದಿದ್ದಾರೆ. ದ.ಆಫ್ರಿಕ ತಂಡವನ್ನು 58 ಏಕದಿನ, 50 ಟಿ20 ಹಾಗೂ ಏಕೈಕ ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿರುವ ಮೊರ್ಕೆಲ್, ಒಟ್ಟು 1,422ರನ್ ಗಳಿಸಿದ್ದಾರೆ. 77 ವಿಕೆಟ್‌ಗಳನ್ನು ಕಬಳಿಸಿದ್ದರು.

2011ರಲ್ಲಿ ಚೆನ್ನೈ ಪರ ಐಪಿಎಲ್ ಪಂದ್ಯಗಳಲ್ಲಿ ಆಡಿರುವ 37 ವರ್ಷ ವಯಸ್ಸಿನ ಮೊರ್ಕೆಲ್, ತಂಡ ಟ್ರೋಫಿ ಜಯಿಸುವಲ್ಲಿ ಕೊಡುಗೆ ನೀಡಿದ್ದರು. ನಿವೃತ್ತಿ ಕುರಿತು ಮಾತನಾಡಿರುವ ಅವರು, ‘‘ನನ್ನ ಕ್ರಿಕೆಟ್ ಸಮಯ ಮುಗಿಯುತ್ತಾ ಬಂದಿದೆ. 20 ವರ್ಷದ ನನ್ನ ಕ್ರಿಕೆಟ್ ಪ್ರಯಾಣ ಸಾಕಷ್ಟು ಖುಷಿ ನೀಡಿದೆ. ವೃತ್ತಿ ಬದುಕಿನ ಅದ್ಭುತ ನೆನಪುಗಳನ್ನು ಯಾವಾಗಲೂ ಮೆಲುಕು ಹಾಕುತ್ತೇನೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News