×
Ad

ಕುಸ್ತಿಯಲ್ಲಿ ಮಣಿಪುರಕ್ಕೆ ಚಿನ್ನ: ವೇಟ್‌ಲಿಫ್ಟಿಂಗ್‌ನಲ್ಲಿ ಮಹಾರಾಷ್ಟ್ರ ದಾಖಲೆ

Update: 2019-01-09 23:59 IST

ಪುಣೆ, ಜ.9: ಖೇಲೊ ಇಂಡಿಯಾ ಯೂತ್ ಗೇಮ್ಸ್‌ನ ಮೊದಲ ದಿನವಾದ ಬುಧವಾರ ಮಣಿಪುರದ ಕೆ.ಲೊಯಾನ್‌ಗಂಬಾ ಸಿಂಗ್ ಕುಸ್ತಿಯಲ್ಲಿ ಚಿನ್ನ ಗೆದ್ದುಕೊಂಡರೆ, ವೇಟ್‌ಲಿಫ್ಟಿಂಗ್‌ನಲ್ಲಿ ಮಹಾರಾಷ್ಟ್ರ ದಾಖಲೆ ನಿರ್ಮಿಸಿತು.

ಲೊಯಾನ್‌ಗಂಬಾ ಅಂಡರ್-17 ಗ್ರಿಕೊ-ರೊಮನ್ 51 ಕೆಜಿ ವಿಭಾಗದಲ್ಲಿ ಮಹಾರಾಷ್ಟ್ರದ ಧ್ಯಾನೇಶ್ವರ್ ದೇಸಾಯಿಯನ್ನು ಮಣಿಸಿದರು.

ಇದೇ ವೇಳೆ, ವೇಟ್‌ಲಿಫ್ಟಿಂಗ್‌ನಲ್ಲಿ ಮಹಾರಾಷ್ಟ್ರ ಹಲವು ರಾಷ್ಟ್ರೀಯ ದಾಖಲೆ ಪುಡಿಗಟ್ಟಿತು. 4 ಚಿನ್ನದ ಪದಕ ಪೈಕಿ ಮೂರನ್ನು ಬಾಚಿಕೊಂಡಿತು.

ಅಂಡರ್-21 ಯುವಕರ 55 ಕೆಜಿ ವಿಭಾಗದಲ್ಲಿ ಮಹಾರಾಷ್ಟ್ರದ ಶುಭಂ ಕೊಲೆಕರ್ ಒಟ್ಟು 236 ಕೆಜಿ ತೂಕ ಎತ್ತಿ ಹಿಡಿದು ಚಿನ್ನ ಜಯಿಸಿ ತನ್ನ ರಾಷ್ಟ್ರೀಯ ದಾಖಲೆ ಮುರಿದರು. ಒಡಿಶಾದ ಮುನಾ ನಾಯಕ್(230 ಕೆಜಿ) ಹಾಗೂ ಮಹಾರಾಷ್ಟ್ರದ ಪ್ರಶಾಂತ್ ಕೊಲಿ(225ಕೆಜಿ)ಬೆಳ್ಳಿ ಹಾಗೂ ಕಂಚು ಜಯಿಸಿದರು. ಅಂಡರ್-17 ಬಾಲಕರ 55 ಕೆಜಿ ವಿಭಾಗದಲ್ಲಿ ಮಹಾರಾಷ್ಟ್ರದ ಅಭಿಷೇಕ್ ಗಣೇಶ್(211)ಚಿನ್ನ ಜಯಿಸಿದರು. ಛತ್ತೀಸ್‌ಗಡದ ಸುಭಾಶ್(205) ಹಾಗೂ ಅರುಣಾಚಲ ಪ್ರದೇಶದ ಗೊಲಮ್ ಟಿಂಕು(201)2ನೇ, 3ನೇ ಸ್ಥಾನ ಪಡೆದರು. ಮಹಿಳೆಯರ ಏಕೈಕ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಸೌಮ್ಯ ದಳ್ವಿ(40ಕೆಜಿ ವಿಭಾಗ)111 ಕೆಜಿ ತೂಕ ಎತ್ತಿ ಹಿಡಿದು ಚಿನ್ನ ಜಯಿಸಿದರು. ಆರತಿ(100) ಹಾಗೂ ಸಂದ್ಯಾ(92)2,3ನೇ ಸ್ಥಾನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News