ನಿಗೂಢ ರೇಡಿಯೊ ಅಲೆಗಳು ಪತ್ತೆ: ಅಗಾಧ ದೂರದ ಅನ್ಯಗ್ರಹವಾಸಿಗಳು ಕಳುಹಿಸಿದ್ದೇ?

Update: 2019-01-10 16:54 GMT

ಟೊರಾಂಟೊ, ಜ. 10: ವಿಜ್ಞಾನಿಗಳು ಎರಡನೇ ಬಾರಿಗೆ ‘ವೇಗದ ರೇಡಿಯೊ ಅಲೆ’ (ಎಫ್‌ಆರ್‌ಬಿ)ಗಳನ್ನು ಪತ್ತೆಹಚ್ಚಿದ್ದಾರೆ.

ಈ ಅಲೆಗಳು, ಈ ನಿಗೂಢ ಸಂಕೇತಗಳ ಮೂಲಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಸಹಾಯ ಮಾಡಬಹುದಾಗಿದೆ. ಹಿಂದೆ ಆಧುನಿಕ ತಂತ್ರಜ್ಞಾನ ಹೊಂದಿದ್ದ ಅನ್ಯಗ್ರಹ ವಾಸಿಗಳಿಂದ ಬಂದಿರುವ ಸಂದೇಶ ಇದಾಗಿರಬಹುದೆಂದು ನಂಬಲಾಗಿದೆ.

ಅದೇ ವೇಳೆ, ಬಿಲಿಯಗಟ್ಟಳೆ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ನಡೆಯುವ ಶಕ್ತಿಶಾಲಿ ಖಗೋಳ ವಿದ್ಯಮಾನಗಳಿಂದಲೂ ಈ ಮಾದರಿಯ ಎಫ್‌ಆರ್‌ಬಿಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಕೆಲವು ವಿಜ್ಞಾನಿಗಳು ಭಾವಿಸುತ್ತಾರೆ.

ದೂರದ ಗ್ಯಾಲಕ್ಸಿಗಳಲ್ಲಿ ನಕ್ಷತ್ರ ಮಂಡಲಗಳ ನಡುವೆ ಕಾರ್ಯಾಚರಿಸುತ್ತಿರುವ ಶೋಧ ನೌಕೆಗಳಿಗೆ ವಿದ್ಯುತ್ ಪೂರೈಸುವ ಗ್ರಹಗಳ ಗಾತ್ರದ ಟ್ರಾನ್ಸ್‌ಮಿಟರ್‌ಗಳಿಂದ ಈ ಎಫ್‌ಆರ್‌ಬಿಗಳು ಸೃಷ್ಟಿಯಾಗಿರಬಹುದು ಎಂಬುದಾಗಿ 2017ರಲ್ಲಿ ಹಾರ್ವರ್ಡ್ ವಿಜ್ಞಾನಿಗಳು ಊಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News