ಪರಮಾಣು ನಿಶ್ಶಸ್ತ್ರೀಕರಣಕ್ಕೆ ಪ್ರಾಯೋಗಿಕ ಕ್ರಮಗಳ ಅಗತ್ಯ: ದಕ್ಷಿಣ ಕೊರಿಯ ಅಧ್ಯಕ್ಷ

Update: 2019-01-10 16:57 GMT

ಸಿಯೋಲ್, ಜ. 10: ಉತ್ತರ ಕೊರಿಯದ ಮೇಲಿನ ಆರ್ಥಿಕ ದಿಗ್ಬಂಧನಗಳು ತೆರವುಗೊಳ್ಳಬೇಕಾದರೆ, ಆ ದೇಶವು ಪರಮಾಣು ನಿಶ್ಶಸ್ತ್ರೀಕರಣದ ನಿಟ್ಟಿನಲ್ಲಿ ದಿಟ್ಟ ಹಾಗೂ ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ದಕ್ಷಿಣ ಕೊರಿಯದ ಅಧ್ಯಕ್ಷ ಮೂನ್ ಜೇ-ಇನ್ ಗುರುವಾರ ಹೇಳಿದ್ದಾರೆ.

ಉತ್ತರ ಕೊರಿಯ ಮತ್ತು ಅಮೆರಿಕಗಳ ನಡುವಿನ ಮಾತುಕತೆಗಳು ನಿಂತಿರುವ ಹಿನ್ನೆಲೆಯಲ್ಲಿ ಅವರು ಹೇಳಿಕೆ ನೀಡಿದ್ದಾರೆ.

‘‘ಉತ್ತರ ಕೊರಿಯದ ನಿರಂತರ ಪರಮಾಣು ನಿಶ್ಶಸ್ತ್ರೀಕರಣವನ್ನು ಸಾಧಿಸಲು ಪೂರಕ ಕ್ರಮಗಳನ್ನು ರೂಪಿಸಬೇಕು’’ ಎಂದು ಅವರು ಹೇಳಿದರು.

ಶಾಂತಿ ಒಪ್ಪಂದಕ್ಕೆ ಅಮೆರಿಕ ಒಪ್ಪಿಕೊಳ್ಳಲು ಹಾಗೂ 1950-53ರ ಕೊರಿಯ ಯುದ್ಧ ಕೊನೆಗೊಂಡಿದೆ ಎಂಬ ಅಧಿಕೃತ ಘೋಷಣೆ ಹೊರಬೀಳಲು ಅಗತ್ಯವಾದ ಪೂರಕ ವಾತಾವರಣವನ್ನು ಉತ್ತರ ಕೊರಿಯ ರೂಪಿಸಬೇಕು ಎಂದರು.

‘ಕೊರಿಯ ಪರ್ಯಾಯ ದ್ವೀಪದ ಪರಮಾಣು ನಿಶ್ಶಸ್ತ್ರೀಕರಣ’ದ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಉತ್ತರ ಕೊರಿಯ ಪದೇ ಪದೇ ಹೇಳುತ್ತಾ ಬಂದಿದೆ. ಆದರೆ, ‘ಕೊರಿಯ ಪರ್ಯಾಯ ದ್ವೀಪ’ ಎನ್ನುವುದು ಅನಿರ್ದಿಷ್ಟವಾಗಿದೆ. ಇದರ ವ್ಯಾಪ್ತಿಯಲ್ಲಿ ದಕ್ಷಿಣ ಕೊರಿಯದಲ್ಲಿರುವ ಅಮೆರಿಕ ಸೈನಿಕರು ಮತ್ತು ವಿಶಾಲ ವಲಯವನ್ನೂ ತರಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News