×
Ad

ಜಿಂದ್ ಉಪ ಚುನಾವಣೆ: ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಅಭ್ಯರ್ಥಿ

Update: 2019-01-10 22:33 IST

ಹೊಸದಿಲ್ಲಿ, ಜ. 10: ಹರ್ಯಾಣದ ಜಿಂದ್ ವಿಧಾನ ಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿದೆ. ಜಿಂದ್ ವಿಧಾನ ಸಭಾ ಸ್ಥಾನಕ್ಕಾಗಿ ಜನವರಿ 28ರಂದು ಚುನಾವಣೆ ನಡೆಯಲಿದೆ ಹಾಗೂ ಜನವರಿ 31ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗ ಡಿಸೆಂಬರ್ 31ರಂದು ಪ್ರಕಟಿಸಿತ್ತು.

ಜನವರಿ 3ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಜನವರಿ 10ರಂದು ಅಂತ್ಯಗೊಳ್ಳಲಿದೆ. ಸುರ್ಜೇವಾಲ ಹರ್ಯಾಣದ ಕೈಥಲ್ ಕ್ಷೇತ್ರದ ಹಾಲಿ ಶಾಸಕ. ಈ ಸ್ಥಾನಕ್ಕೆ ಬಿಜೆಪಿಯಿಂದ ಇಂಡಿಯನ್ ನ್ಯಾಶನಲ್ ಲೋಕ ದಳದ ಶಾಸಕರಾಗಿದ್ದ ದಿವಂಗತ ಹರಿ ಚಂದ್ ಮಿದ್ಧಾ ಅವರ ಪುತ್ರ ಕೃಷ್ಣ ಮಿದ್ಧಾ ಸ್ಪರ್ಧಿಸಲಿದ್ದಾರೆ. ಐಎನ್‌ಎಲ್‌ಡಿ ಇನ್ನಷ್ಟೇ ತನ್ನ ಅಭ್ಯರ್ಥಿಯನ್ನು ಘೋಷಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News