×
Ad

ಪಾಕ್ ವಿರುದ್ಧ ಏಕದಿನ ಸರಣಿಗೆ ದ.ಆಫ್ರಿಕ ತಂಡ ಪ್ರಕಟ

Update: 2019-01-10 23:35 IST

ಜೋಹಾನ್ಸ್‌ಬರ್ಗ್, ಜ.10: ಪಾಕಿಸ್ತಾನ ವಿರುದ್ಧ ಜ.19ರಿಂದ ಆರಂಭವಾಗಲಿರುವ ಮೊದಲ ಎರಡು ಏಕದಿನ ಪಂದ್ಯಕ್ಕೆ ಗುರುವಾರ 14 ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಲಾಗಿದೆ. ಹೊಸ ಮುಖ ರಾಸ್ಸಿ ವ್ಯಾನ್ ಡರ್ ಡಸೆನ್‌ಗೆ ಮಣೆ ಹಾಕಲಾಗಿದೆ.

29ರ ಹರೆಯದ ವ್ಯಾನ್‌ಡರ್ ಡಸೆನ್ ದಕ್ಷಿಣ ಆಫ್ರಿಕದ ಟ್ವೆಂಟಿ-20 ತಂಡಕ್ಕೆ ಆಯ್ಕೆಯಾಗಿದ್ದು, ಇತ್ತೀಚೆಗೆ ನಡೆದ ದೇಶೀಯ ಸೂಪರ್ ಲೀಗ್ ಟಿ-20 ಟೂರ್ನಮೆಂಟ್‌ನಲ್ಲಿ ಅಗ್ರ ಸ್ಕೋರರ್ ಎನಿಸಿಕೊಂಡಿದ್ದರು.

ದ. ಆಫ್ರಿಕ ಮೇ 30 ರಿಂದ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಆರಂಭವಾಗಲಿರುವ ಕ್ರಿಕೆಟ್ ವಿಶ್ವಕಪ್‌ಗೆ ಮೊದಲು ಪಾಕ್ ಹಾಗೂ ಶ್ರೀಲಂಕಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಸರಣಿಯು ವಿಶ್ವಕಪ್ ತಂಡಕ್ಕೆ ಉತ್ತಮ ಅಭ್ಯಾಸ ಪಂದ್ಯವಾಗಿದೆ ಎಂದು ಕೋಚ್ ಒಟ್ಟಿಸ್ ಗಿಬ್ಸನ್ ಹೇಳಿದ್ದಾರೆ.

ದ.ಆಫ್ರಿಕ ಏಕದಿನ ತಂಡ

►ಎಫ್‌ಡು ಪ್ಲೆಸಿಸ್(ನಾಯಕ), ಹಾಶಿಮ್ ಅಮ್ಲ, ಕ್ವಿಂಟನ್ ಡಿಕಾಕ್, ರೀಝಾ ಹೆಂಡ್ರಿಕ್ಸ್, ಇಮ್ರಾನ್ ತಾಹಿರ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಡೇನ್ ಪ್ಯಾಟರ್ಸನ್, ಫೆಹ್ಲುಕ್ವಾಯೊ, ಡ್ವೈಯ್ನಾ ಪ್ರಿಟೋರಿಯಸ್, ಕಾಗಿಸೊ ರಬಾಡ, ತಬ್ರೈಝ್ ಶಂಸಿ, ಡೇಲ್ ಸ್ಟೇಯ್ನಿ, ರಾಸ್ಸಿ ವ್ಯಾನ್‌ಡರ್ ಡಸೆನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News