ಟೋಕಿಯೊ ಒಲಿಂಪಿಕ್ಸ್ ಗೆ ಬೀರೇಂದ್ರ ಪ್ರಸಾದ್ ಚೀಫ್‌ಡಿ ಮಿಶನ್
Update: 2019-01-10 23:41 IST
ಹೊಸದಿಲ್ಲಿ, ಜ.10: ಭಾರತೀಯ ವೇಟ್ ಲಿಫ್ಟಿಂಗ್ ಫೆಡರೇಶನ್(ಐಡಬ್ಲುಎಫ್)ಅಧ್ಯಕ್ಷ ಬೀರೇಂದ್ರ ಪ್ರಸಾದ್ ಬೈಶ್ಯಾ 2020ರ ಟೋಕಿಯೊ ಒಲಿಂಪಿಕ್ಸ್ ಗೆ ಚೀಫ್ ಡಿ ಮಿಶನ್ ಆಗಿ ಗುರುವಾರ ನೇಮಕಗೊಂಡಿದ್ದಾರೆ.
‘‘ಇದೇ ಮೊದಲ ಬಾರಿ ವೇಟ್‌ಲಿಫ್ಟಿಂಗ್ ಕ್ರೀಡೆಗೆ ಒಲಿಂಪಿಕ್ ಗೇಮ್ಸ್‌ನಲ್ಲಿ ಚೀಫ್ ಡಿ ಮಿಶನ್ ಗೌರವ ನೀಡಲು ನಿರ್ಧರಿಸಲಾಗಿದೆ’’ ಎಂದು ಐಡಬ್ಲುಎಫ್ ಕಾರ್ಯದರ್ಶಿ ಸಹದೇವ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಐಒಎ ಉಪಾಧ್ಯಕ್ಷರಾಗಿರುವ ಬೈಶ್ಯಾ ಅಂತರ್‌ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್‌ನಲ್ಲಿ ಕಾರ್ಯಕಾರಿ ಮಂಡಳಿ ಸದಸ್ಯ, ಏಶ್ಯನ್ ವೇಟ್‌ಲಿಫ್ಟಿಂಗ್ ಫೆಡರೇಶನ್‌ನಲ್ಲಿ ಉಪಾಧ್ಯಕ್ಷ ಹಾಗೂ ಕಾಮನ್‌ವೆಲ್ತ್‌ವೇಟ್ ಲಿಫ್ಟಿಂಗ್‌ಫೆಡರೇಶನ್‌ನಲ್ಲಿ ಉಪಾಧ್ಯಕ್ಷ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.