ಜೊಕೊವಿಕ್, ಹಾಲೆಪ್‌ಗೆ ಅಗ್ರ ಶ್ರೇಯಾಂಕ

Update: 2019-01-10 18:16 GMT

ಮೆಲ್ಬೋರ್ನ್, ಜ.10: ವಿಶ್ವ ಟೆನಿಸ್ ರ್ಯಾಂಕಿಂಗ್ ಪುರುಷರ ವಿಭಾಗದ ನಂ.1 ನೊವಾಕ್ ಜೊಕೊವಿಕ್ ಹಾಗೂ ಮಹಿಳಾ ವಿಭಾಗದ ಅಗ್ರ ಆಟಗಾರ್ತಿ ಸಿಮೊನಾ ಹಾಲೆಪ್‌ರಿಗೆ ಮುಂದಿನ ವಾರದಿಂದ ಆರಂಭವಾಗಲಿರುವ ಪ್ರತಿಷ್ಠಿತ ಆಸ್ಟ್ರೇಲಿಯ ಓಪನ್ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ನೀಡಲಾಗಿದೆ.

ಜೊಕೊವಿಕ್ ತಮ್ಮ ದೀರ್ಘಕಾಲದ ಎದುರಾಳಿ ರಫೆಲ್ ನಡಾಲ್(2ನೇ ಶ್ರೇಯಾಂಕ) , ಹಾಲಿ ಚಾಂಪಿಯನ್ ರೋಜರ್ ಫೆಡರರ್(3) ಹಾಗೂ ತರುಣ ಆಟಗಾರ ಅಲೆಕ್ಸಾಂಡರ್ ಝ್ವರೆವ್‌ರನ್ನು(4) ಹಿಂದಿಕ್ಕಿ ಈ ಸ್ಥಾನ ಪಡೆದಿದ್ದಾರೆ.

ಸೋಮವಾರದಿಂದ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯ ಓಪನ್ ಆರಂಭವಾಗಲಿದೆ. 7ನೇ ಬಾರಿ ಟೂರ್ನಿಯ ಪ್ರಶಸ್ತಿ ಜಯಿಸಲು ಸ್ವಿಸ್ ದಂತಕತೆ ರೋಜರ್ ಫೆಡರರ್ ಹಾಗೂ ಸರ್ಬಿಯದ ಜೊಕೊವಿಕ್ ಎದುರು ನೋಡುತ್ತಿದ್ದಾರೆ.

ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್ಸನ್‌ಗೆ 5 ಹಾಗೂ ಕ್ರೋಯೇಶ್ಯದ ಮರಿನ್ ಸಿಲಿಕ್‌ಗೆ 6ನೇ ಸ್ಥಾನ ನೀಡಲಾಗಿದೆ.

ಮಹಿಳಾ ವಿಭಾಗದಲ್ಲಿ ರೊಮಾನಿಯದ ಸಿಮೊನಾ ಹಾಲೆಪ್ ಅಗ್ರಸ್ಥಾನದಲ್ಲಿದ್ದರೆ, ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ ದ್ವಿತೀಯ ಹಾಗೂ ಡೆನ್ಮಾರ್ಕ್‌ನ ಕರೊಲಿನ್ ವೊಝ್ನಿಯಾಕಿ ತೃತೀಯ ಶ್ರೇಯಾಂಕ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News