ಶ್ರೀಮಂತ ಸೆಲೆಬ್ರಿಟಿ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಂ.1

Update: 2019-01-10 18:18 GMT

ಮುಂಬೈ, ಜ.10: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದೇಶದ ಶ್ರೀಮಂತ ಸೆಲೆಬ್ರಿಟಿ ಬ್ರಾಂಡ್ ಪಟ್ಟಿಯಲ್ಲಿ ಸತತ ಎರಡನೇ ವರ್ಷವೂ ಅಗ್ರ ಸ್ಥಾನದಲ್ಲಿದ್ದಾರೆ. 2018ರಲ್ಲಿ ಶೇ.18ರಷ್ಟು ಬ್ರಾಂಡ್ ವೌಲ್ಯ ಹೆಚ್ಚಾಗಿದ್ದು ಅವರ ವೌಲ್ಯ 170.8 ಮಿಲಿಯನ್ ಡಾಲರ್‌ಗೆ ತಲುಪಿದೆ ಎಂದು ವರದಿಯಾಗಿದೆ.

ದಿಲ್ಲಿ ಕ್ರಿಕೆಟಿಗ ಕೊಹ್ಲಿ 2018ರ ನವೆಂಬರ್‌ನಲ್ಲಿ 24 ಬ್ರಾಂಡ್‌ಗಳೊಂದಿಗೆ ಸಹಿ ಹಾಕಿದ್ದಾರೆ. ಕೊಹ್ಲಿ ಬಳಿಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಳೆದ ಬಾರಿ ರ್ಯಾಂಕಿಂಗನ್ನು ಉತ್ತಮಪಡಿಸಿಕೊಂಡಿದ್ದು ಅವರ ವೌಲ್ಯ 102.5 ಮಿಲಿಯನ್ ಡಾಲರ್‌ಗೆ ತಲುಪಿದೆ. ದೀಪಿಕಾ ಕೂಡ 2018ರ ನವೆಂಬರ್‌ನಲ್ಲಿ 21 ಬ್ರಾಂಡ್‌ಗಳೊಂದಿಗೆ ಸಹಿ ಹಾಕಿದ್ದಾರೆ.

ಬಾಲಿವುಡ್ ತಾರೆಯರಾದ ಅಕ್ಷಯ್ ಕುಮಾರ್ ಹಾಗೂ ರಣವೀರ್ ಸಿಂಗ್ ಅವರ ರ್ಯಾಂಕಿಂಗ್ ಕೂಡ ಪ್ರಗತಿಯಾಗಿದ್ದು ಈ ಇಬ್ಬರು ಕ್ರಮವಾಗಿ 67.3 ಮಿಲಿಯನ್ ಡಾಲರ್ ಹಾಗೂ 63 ಮಿ.ಡಾಲರ್ ಆದಾಯದೊಂದಿಗೆ ಮೂರು ಹಾಗೂ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ನಟ ಶಾರೂಕ್ ಖಾನ್(60.7 ಮಿ.ಡಾಲರ್)2ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News