ಭಾರತ-ಆಸ್ಟ್ರೇಲಿಯ ಸರಣಿ ವೇಳಾಪಟ್ಟಿ ಪ್ರಕಟ

Update: 2019-01-10 18:20 GMT

ಹೊಸದಿಲ್ಲಿ, ಜ.10: ಆಸ್ಟ್ರೇಲಿಯ ವಿರುದ್ಧ ಭಾರತ ತವರಿನಲ್ಲಿ ಆಡುವ ಕ್ರಿಕೆಟ್ ಸರಣಿಯ ವೇಳಾಪಟ್ಟಿಯನ್ನು ಗುರುವಾರ ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯ ಪ್ರಕಟಿಸಿವೆ. ಫೆ.24ರಿಂದ ಆರಂಭವಾಗಲಿರುವ ಈ ಸರಣಿಯು ಮಾ.13ರವರೆಗೆ ನಡೆಯಲಿದೆ. ಎರಡು ಟಿ20 ಹಾಗೂ ಐದು ಏಕದಿನ ಪಂದ್ಯಗಳನ್ನು ಈ ಸರಣಿಯು ಒಳಗೊಂಡಿದ್ದು, ಪಂದ್ಯಗಳು ಕ್ರಮವಾಗಿ ಭಾರತೀಯ ಕಾಲಮಾನ ಸಂಜೆ 7 ಗಂಟೆ ಹಾಗೂ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿವೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಶನಿವಾರದಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ. ಆಸ್ಟ್ರೇಲಿಯ ಸರಣಿ ನಂತರ ಭಾರತ, ನ್ಯೂಝಿಲೆಂಡ್ ವಿರುದ್ಧ ಏಕದಿನ ಪಂದ್ಯಗಳನ್ನು ಆಡಲಿದೆ. ಆಸ್ಟ್ರೇಲಿಯ ವಿರುದ್ಧ ಭಾರತದಲ್ಲಿ ನಡೆಯಲಿರುವ ಸರಣಿಯ ವೇಳಾಪಟ್ಟಿ ಇಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News