ಅಡ್ಯಾರ್: ಕ್ಯಾಂಬ್ರಿಡ್ಜ್ ಸ್ಕೂಲ್‌ನಲ್ಲಿ ಬೊಂದೇಲ್ ಲಾಫ್ಟರ್ ಕಾರ್ಯಕ್ರಮ

Update: 2019-01-11 09:11 GMT

ಮಂಗಳೂರು, ಜ.11: ಬೊಂದೇಲ್ ಲಾಫ್ಟರ್ ಕ್ಲಬ್ ವತಿಯಿಂದ ಅಡ್ಯಾರ್ ಸಮೀಪದ ಟಿಸಿಐಎಸ್ ಕ್ಯಾಂಬ್ರಿಡ್ಜ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಲಾಫ್ಟರ್ ಕಾರ್ಯಕ್ರಮವು ಗುರುವಾರ ನಡೆಯಿತು.

40 ನಿಮಿಷಗಳ ಲಾಫ್ಟರ್ ಕಾರ್ಯಕ್ರಮವನ್ನು ಕ್ಲಬ್ ಸಂಸ್ಥಾಪಕ ಜಾನ್ ಮೊಂತೇರೊ ಮತ್ತು ಇತ್ತೀಚೆಗೆ 5,000ನೇ ಕಾರ್ಯಕ್ರಮ ನಡೆಸಿದ್ದ ತಂಡದ ಸ್ಥಾಪಕ ಸದಸ್ಯರಾದ ಪ್ರೊ. ಎ.ಎಂ.ಖಲೀಲ್ ಮತ್ತು ವೆಂಕಪ್ಪ ಎಂ. ನಡೆಸಿಕೊಟ್ಟರು.

ಶಾಲೆಯ 7ನೇ ತರಗತಿಯ ಸುಮಾರು ಇನ್ನೂರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಾಲೆಯ ಮುಖ್ಯಸ್ಥ ಮರ್ಸಿ ರೇಗೊ ಬೊಂದೇಲ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News