ಬಾರ್ಟಿ ಫೈನಲ್‌ಗೆ ಪ್ರವೇಶ

Update: 2019-01-11 18:16 GMT

ಸಿಡ್ನಿ, ಜ.11: ಹಾಲೆಂಡ್‌ನ ವಿಶ್ವ ನಂ.9 ಆಟಗಾರ್ತಿ ಕಿಕಿ ಬರ್ಟನ್ಸ್ ಅವರನ್ನು ಮಣಿಸಿದ ಆಸ್ಟ್ರೇಲಿಯ ಟೆನಿಸ್ ತಾರೆ ಆ್ಯಶ್ಲೆ ಬಾರ್ಟಿ ಅವರು ಸಿಡ್ನಿ ಅಂತರ್‌ರಾಷ್ಟ್ರೀಯ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ನಲ್ಲಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ. ಈ ಮೂಲಕ ಮುಂಬರುವ ಆಸ್ಟ್ರೇಲಿಯ ಓಪನ್‌ಗೆ ಭರ್ಜರಿ ತಯಾರಿ ನಡೆಸಿದರು.

ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕಿಕಿ ಅವರನ್ನು 6-7(4/7), 6-4, 7-5ರಿಂದ ಮಣಿಸಿದ ಬಾರ್ಟಿ ಫೈನಲ್ ಪಂದ್ಯದಲ್ಲಿ 2015ರ ಚಾಂಪಿಯನ್ ಪೆಟ್ರಾ ಕ್ವಿಟೊವಾ ಅಥವಾ ಬೆಲಾರಶ್ಯದ ಅಲಿಯಾಕ್ಸಾಂಡ್ರಾ ಸಾಸ್ನೊವಿಚ್ ಅವರನ್ನು ಎದುರಿಸಲಿದ್ದಾರೆ. ವಿಶ್ವ ನಂ.1 ಸಿಮೊನಾ ಹಾಲೆಪ್ ಹಾಗೂ ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಂಪೆಕೊ ಅವರನ್ನು ಮಣಿಸಿದ್ದ ಬರ್ಟಿ ಕ್ವಾರ್ಟರ್‌ಫೈನಲ್‌ನಲ್ಲಿ 10ನೇ ಶ್ರೇಯಾಂಕದ ಬೆಲ್ಜಿಯಂನ ಎಲಿಸಾ ಮೆರ್ಟೆನ್ಸ್ ಅವರಿಗೆ ಮಣ್ಣುಮುಕ್ಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News