ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನನಿಗೆ 13 ವರ್ಷ ಜೈಲು

Update: 2019-01-12 15:57 GMT

ಸಿಂಗಾಪುರ, ಜ. 12: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ 31 ವರ್ಷದ ಭಾರತೀಯನೊಬ್ಬನಿಗೆ ಸಿಂಗಾಪುರದ ಹೈಕೋರ್ಟ್ 13 ವರ್ಷಗಳ ಜೈಲು ಮತ್ತು 12 ಛಡಿಯೇಟು ಶಿಕ್ಷೆ ವಿಧಿಸಿದೆ.

ಸಿಂಗಾಪುರದ ಮಿನಿಮಾರ್ಟ್ ಒಂದರಲ್ಲಿ ಉದ್ಯೋಗಿಯಾಗಿದ್ದ ಉದಯಕುಮಾರ್ ದಕ್ಷಿಣಾಮೂರ್ತಿ 12 ವರ್ಷದ ಬಾಲಕಿಯನ್ನು ಉಡುಗೊರೆಗಳನ್ನು ಕೊಟ್ಟು ಓಲೈಸಿದ್ದ ಹಾಗೂ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.

ಅವನ ವಯಸ್ಕ ಗರ್ಭಿಣಿ ಸಂಗಾತಿಯು ಅವನ ಮೊಬೈಲ್‌ನಲ್ಲಿ ಬಾಲಕಿಯ ನಗ್ನಚಿತ್ರ ನೋಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News