ಉತ್ತರಾಖಂಡ: ಬಿಜೆಪಿ ಮುಖಂಡನ ವ್ಯಾಪಾರ ಸಂಸ್ಥೆಗಳ ಮೇಲೆ ಐಟಿ ದಾಳಿ

Update: 2019-01-12 17:09 GMT

ಡೆಹ್ರಾಡೂನ್, ಜ.12: ಉತ್ತರಾಖಂಡ ಮತ್ತು ಹರ್ಯಾಣದಲ್ಲಿ ಹಿರಿಯ ಬಿಜೆಪಿ ಮುಖಂಡ ಅನಿಲ್ ಗೋಯಲ್ ಮತ್ತವರ ಕುಟುಂಬದ ಒಡೆತನದಲ್ಲಿರುವ 13 ವ್ಯಾಪಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಡೆಹ್ರಾಡೂನ್‌ನಲ್ಲಿ ಗೋಯಲ್ ಮಾಲಕತ್ವದ ಕ್ವಾಲಿಟಿ ಹಾರ್ಡ್‌ವೇರ್, ಉಮಂಗ್ ಸಾರೀಸ್ ಮತ್ತು ಅಲೆಕ್ಸಿಯಾ ಪ್ಯಾನೆಲ್ಸ್ ಸಂಸ್ಥೆ, ರೂರ್ಕಿಯಲ್ಲಿರುವ ಕ್ವಾಂಟಮ್ ಯೂನಿವರ್ಸಿಟಿ, ಹರ್ಯಾಣದ ಯಮುನಾ ನಗರದಲ್ಲಿರುವ ಪಂಜಾಬ್ ಪ್ಲೈವುಡ್ ಇಂಡಸ್ಟ್ರಿ ಸೇರಿದಂತೆ 13 ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಆಯುಕ್ತ ಅಮರೇಂದ್ರ ಕುಮಾರ್ ತಿಳಿಸಿದ್ದಾರೆ. ವ್ಯಾಪಾರದ ವಿವರವನ್ನು ಮರೆಮಾಚಿರುವುದು, ಲೆಕ್ಕಕ್ಕೆ ಸಿಗದ ರಶೀದಿಗಳು, ಹೂಡಿಕೆಗಳ ಲೆಕ್ಕ ನೀಡದಿರುವ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ವಶಪಡಿಸಿಕೊಳ್ಳಲಾದ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಗೋಯಲ್ 2016ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News