ಆಲಡ್ಕ: ಜ. 19ರಂದು ದಫ್ ಸ್ಪರ್ಧೆ, ಸೌಹಾರ್ದ ಸಂಗಮ

Update: 2019-01-13 06:05 GMT

ವಿಟ್ಲ, ಜ. 13: ದಫ್ ಎಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ದಶಮಾನೋತ್ಸವ ಹಾಗೂ ಕರಾವಳಿ ಟೈಮ್ಸ್ ಪಾಕ್ಷಿಕ ಇದರ ನಾಲ್ಕನೇ ವಾರ್ಷಿಕೋತ್ಸವ ಪ್ರಯುಕ್ತ ದಫ್ ಸ್ಪರ್ಧೆ, ನಅತೇ ಶರೀಫ್, ಸೌಹಾರ್ದ ಸಂಗಮ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮವು ಜ.19ರ ಸಂಜೆ 7ಕ್ಕೆ ಪಾಣೆಮಂಗಳೂರು-ಆಲಡ್ಕ ಮೈದಾನದಲ್ಲಿ ನಡೆಯಲಿದೆ.

ಆಲಡ್ಕ ಎಂಜೆಎಂ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದು, ಸೂಫಿ ಹಾಗೂ ಶರಣ ಸಂತರ ಸೇವಾ ಸಮಿತಿ ರಾಜ್ಯಾಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಮೈಸೂರು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಾಧಕರನ್ನು ಸನ್ಮಾನಿಸುವರು. ಮಾಜಿ ಸಚಿವ ಬಿ. ರಮಾನಾಥ ರೈ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆಗೊಳಿಸುವರು. ಮೈಸೂರು ಶ್ರೀ ಮಹಾಲಿಂಗೇಶ್ವರ ಮಠದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಮುಖ್ಯ ಭಾಷಣಗೈಯುವರು.

ಮುಖ್ಯ ಅತಿಥಿಗಳಾಗಿ ಹಾಜಿ ಎನ್.ಎಚ್. ಆದಂ ಫೈಝಿ, ಜಿ.ಪಂ. ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್, ಬಿ. ಪದ್ಮಶೇಖರ್ ಜೈನ್, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಹಿದಾಯ ಫೌಂಡೇಶನ್ ಸಂಚಾಲಕ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು,  ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಸದಸ್ಯರಾದ ಪ್ರಭಾಕರ ಪ್ರಭು, ಹಾಜಿ ಆದಂ ಕುಂಞಿ, ಸಂಜೀವ ಪೂಜಾರಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಹಮ್ಮದ್ ಕರಂಬಾರು, ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಬಂಟ್ವಾಳ ತಾಲೂಕು ಅಧ್ಯಕ್ಷ ಫಾರೂಕ್ ಬಂಟ್ವಾಳ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ಹಿರಿಯ ಪತ್ರಕರ್ತ ವೆಂಕಟೇಶ್ ಬಂಟ್ವಾಳ, ಕನ್ನಡ ಸಿರಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ವಿಶ್ವನಾಥ ಬಂಟ್ವಾಳ  ಮೊದಲಾದವರು ಭಾಗವಹಿಸಲಿದ್ದಾರೆ.

ದಫ್ ಕಲಾ ರಂಗದಲ್ಲಿ ಸೇವೆ ಸಲ್ಲಿಸಿದ ದಫ್ ಉಸ್ತಾದರುಗಳಾದ  ಎನ್.ಕೆ. ಕಾಸಿಂ ನೇರಳಕಟ್ಟೆ, ಹಸೈನಾರ್ ಕಡಂಬು, ಅಬ್ದುಲ್ ರಝಾಕ್ ಸಜಿಪ, ರಫೀಕ್ ಮುಸ್ಲಿಯಾರ್, ಇಬ್ರಾಹಿಂ ಕಡಂಬು, ಅಬ್ದುಲ್ ಖಾದರ್ ಮುಸ್ಲಿಯಾರ್, ಅಬ್ದುಲ್ ರಹಿಮಾನ್ ಕೂರ್ನಡ್ಕ, ದಫ್ ಕಲಾ ಪೋಷಕರಾದ ಇಬ್ರಾಹಿಂ ಕೋಟ-ಕುಂದಾಪುರ, ಇಸ್ಮಾಯಿಲ್ ಆರ್ಲಪದವು, ಅಬ್ದುಲ್ ಅಝೀಝ್ ಬೊಳ್ಳಾಯಿ, ವಿವಿಧ ಕ್ಷೇತ್ರದ ಸಾಧಕರಾದ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು, ಎನ್. ಸುಲೈಮಾನ್ ಹಾಜಿ ಸಿಂಗಾರಿ ನಾರ್ಶ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಮತ್ತು ದಫ್ ಎಸೋಸಿಯೇಶನ್ ಸ್ಥಾಪಕಾದಧ್ಯಕ್ಷ ಪಿ. ಮುಹಮ್ಮದ್, ಸ್ಥಾಪಕ ಕಾರ್ಯದರ್ಶಿ ಆರ್.ಕೆ. ಮದನಿ ಅಮ್ಮೆಂಬಳ ಅವರನ್ನು ಸನ್ಮಾನಿಸಲಾಗುವುದು ಹಾಗೂ ಹಲವಾರು ಸಾಮಾಜಿಕ, ರಾಜಕೀಯ, ಧಾರ್ಮಿಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ದಫ್ ಎಸೋಸಿಯೇಶ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಹಾಗೂ ಕರಾವಳಿ ಟೈಮ್ಸ್ ಪ್ರಧಾನ ಸಂಪಾದಕ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News