ರಾಜ್ಯಮಟ್ಟದ ಅಂತರ್ ವಿದ್ಯುತ್ ಕಂಪನಿಗಳ ಕ್ರೀಡಾಕೂಟ

Update: 2019-01-13 11:58 GMT

ಮಣಿಪಾಲ, ಜ.13: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯ ಮಿತ(ಮೆಸ್ಕಾಂ) ಆಶ್ರಯದಲ್ಲಿ ರಾಜ್ಯಮಟ್ಟದಅಂತರ್ ವಿದ್ಯುತ್ ಕಂಪನಿಗಳ ಕ್ರೀಡಾಕೂಟವನ್ನು ಇತ್ತೀಚೆಗೆ ಮಣಿಪಾಲದ ಎಂಡ್ ಪಾಯಿಂಟ್ನಲ್ಲಿರುವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್. ಮಾತನಾಡಿ, ಕ್ರೀಡೆಯಿಂದ ನೆಮ್ಮದಿ, ಸಹಬಾಳ್ವೆ, ಪರಸ್ಪರ ಸಹೋದರತೆ ಭಾವನೆ, ಐಕ್ಯ ಮತ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಕ್ರೀಡಾಪಟುಗಳಾದ ರೋಷನ್ ಘೇರಾವೋ, ಜಯಶ್ರೀ, ಪೂರ್ಣಿಮಾ, ಶ್ವೇತಾ, ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಬೆಂಗಳೂರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ತಾಂತ್ರಿಕ ನಿರ್ದೇಶಕ ಕೆ.ವಿ.ಶಿವಕುಮಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಪ್ರಧಾನ ಕಾರ್ಯದರ್ಶಿ ಕೆಂಪೇಗೌಡ, ಮೆಸ್ಕಾಂ ಮುಖ್ಯ ಆರ್ಥಿಕ ಅಧಿಕಾರಿ ಡಿ.ಆರ್. ಶ್ರೀನಿವಾಸ್, ಮಣಿಪಾಲ ಮಾಹೆ ಪ್ರೋಚಾನ್ಸೆಲರ್ ಡಾ.ಎಚ್.ಎಸ್. ಬಲ್ಲಾಳ್, ನಿಗಮದ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಚ್.ಎಲ್.ಮುಕುಂದ, ಉಡುಪಿ ಕ್ರೀಡಾ ಹಾಗೂ ಯುವ ಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ನೌಕರರ ಸಂಘದ ಕಾರ್ಯಾಧ್ಯಕ್ಷ ಅಮ್ಮಿನಭಾವಿ, ಸಂಸ್ಥೆಯ ಲಿಂಗರಾಜು ಉಪಸ್ಥಿತರಿದ್ದರು.

ಉಡುಪಿ ಅಧೀಕ್ಷಕ ನರಸಿಂಹ ಪಂಡಿತ್ ಸ್ವಾಗತಿಸಿದರು. ಗಿರೀಶ್ ಉಡುಪಿ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಕಂಪನಿ ಗಳಾದ ಕೆಪಿಟಿಸಿಎಲ್, ಮೆಸ್ಕಾಂ, ಬೆಸ್ಕಾಂ, ಸೆಸ್ಕಾಂ, ಜೆಸ್ಕಾಂ, ಹೆಸ್ಕಾಂ ಇವುಗಳ ಸುಮಾರು 400 ಕ್ರೀಡಾಪಟುಗು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News