ಕೋಟದಲ್ಲಿ ಉಡುಪಿ ಜಿಲ್ಲಾ ಮಟ್ಟದ ಜಾನುವಾರು ಜಾತ್ರೆ

Update: 2019-01-13 14:35 GMT

ಕೋಟ, ಜ.13: ಉಡುಪಿ ಜಿಪಂ, ಪಶುಪಾಲನಾ ಇಲಾಖೆ, ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಕೋಟ ಸಹಕಾರಿ ವ್ಯಾವಸಾಯಕ ಸಂಘ, ಕೋಟ ಗೀತಾನಂದ ಫೌಂಡೇಶನ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ವಲಯಗಳ ಸಂಯುಕ್ತ ಆಶ್ರಯದಲ್ಲಿ ಕೋಟ ಶಾಂಭವಿ ವಿದ್ಯಾದಾಯಿನಿ ಶಾಲೆಯ ಮೈದಾನದಲ್ಲಿ ಉಡುಪಿ ಜಿಲ್ಲಾಮಟ್ಟದ ಜಾನುವಾರು ಉತ್ಸವವನ್ನು ರವಿವಾರ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಮಾತನಾಡಿ, ಗ್ರಾಮೀಣ ಭಾಗದ ರೈತರ ಹೈನುಗಾರಿಕೆ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಂತೆ ಮಾಡಲು ಈ ರೀತಿಯ ಉತ್ಸವಗಳು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ್ ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೋಟ ಪಶು ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ ಡಾ. ಬಾಲಕೃಷ್ಣ ಶೆಟ್ಟಿ, ಡಾ.ಅನಂತ ಭಟ್, ಡಾ. ಸರ್ವೋತ್ತಮ, ಡಾ. ಮೋಹನ್ ರೆಡ್ಡಿ, ಡಾ.ರಮೇಶ್ ಉಡುಪ ಅವರನ್ನು ಗೌರವಿಸಲಾಯಿತು. ಉತ್ಸವದ ಕಾರ್ಯದರ್ಶಿ ಡಾ.ಅರುಣ್ ಕುಮಾರ್ ಶೆಟ್ಟಿ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆನಂದ ಸಿ.ಕುಂದರ್ ಅವರನ್ನು ಸನ್ಮಾನಿಸಲಾಯಿತು.

ಅರ್ಹ ಹೈನುಗಾರರಿಗೆ ಉಚಿತ ಜಾನುವಾರಗಳನ್ನು ಕೊಡುಗೆಯಾಗಿ ನೀಡ ಲಾಯಿತು. ಜಾನುವಾರು ಉತ್ಸವ ಸಮಿತಿಯ ಅಧ್ಯಕ್ಷ ತಿಮ್ಮ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ ರಾವ್, ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ., ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಸತ್ಯನಾರಾಯಣ, ಒಕ್ಕೂಟದ ನಿರ್ದೇಶಕಿ ಜಾನಕಿ ಹಂದೆ, ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ.ಸರ್ವೊತ್ತಮ ಉಡುಪ, ಅಶೋಕ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯಲ್ಲಿ ಜಗದೀಶ ಕಾರಂತ, ಕಾಪು ದಿವಾಕರ ಶೆಟ್ಟಿ, ಸೂರ್ಯ ಶೆಟ್ಟಿ ತೆಕ್ಕಟ್ಟೆ, ಸಹಕಾರಿ ಇಲಾಖೆಯ ಸಹಾಯಕ ಉಪನಿಬಂಧಕಿ ಚಂದ್ರ ಪ್ರತಿಮಾ, ಕೋಟ ಸಿ.ಎ.ಬ್ಯಾಂಕ್ ನಿರ್ದೇಶಕ ರಾಜೇಶ ಉಪಾಧ್ಯ, ಶ್ಯಾಮ್‌ಸುಂದರ್ ನಾರಿ, ಸಮಿತಿಯ ಖಜಾಂಚಿ ಬಿ.ಶೋಭಾ ಶೆಟ್ಟಿ, ಜತೆ ಕಾರ್ಯದರ್ಶಿ ರಾಘ ವೇಂದ್ರ ಆಚಾರ್, ತಾಪಂ ಸದಸ್ಯೆ ಲಲಿತಾ ಮೊದಲಾದವರು ಉಪಸ್ಥಿತರಿದ್ದರು.

ರವಿರಾಜ್ ಹೆಗ್ಡೆ ದನಕ್ಕೆ ಚಾಂಪಿಯನ್ ಪ್ರಶಸ್ತಿ

ಜಾನುವಾರು ಜಾತ್ರೆಯ ಎಚ್.ಎಫ್. ವಿಭಾಗದಲ್ಲಿ ರವಿರಾಜ್ ಹೆಗ್ಡೆ ಅಸೋಡು ಅವರ ದನ ಪ್ರಥಮ ಬಹುಮಾನ ಪಡೆಯುವುದರೊಂದಿಗೆ ಚಾಂಪಿಯನ್ ಆಗಿ ಮೂಡಿಬಂದಿತು. ಎಚ್.ಎಫ್. ದನ ವಿಭಾಗ: ಪ್ರ-ಬೆಳ್ವೆ ದುರ್ಗಾ ಡೈರಿ ಬೆಳ್ವೆ, ದ್ವಿ-ವಿಠಲ ಪೂಜಾರಿ ಬಾರಿಕೆರೆ, ತೃ- ರಿಹಾನ್ ಶಾಹಿದ್ ಗುಳ್ಳಾಡಿ. ಎಚ್.ಎಫ್. ಕಡಸು ವಿಭಾಗ: ಪ್ರ- ಪ್ರೇಮಾ ತಿಮ್ಮ ಪೂಜಾರಿ ಗಿಳಿಯಾರು, ದ್ವಿ-ಪ್ರೇಮಾ ತಿಮ್ಮ ಪೂಜಾರಿ, ತೃ-ಗೀತಾ ಶೇಖರ್ ಕಾರ್ತಟ್ಟು, ಎಚ್.ಎಫ್. ಕರು ವಿಭಾಗ: ಪ್ರ- ರಾಧಾ ಬನ್ನಾಡಿ, ದ್ವಿ- ಗೀತಾ ಶೇಖರ್ ಕಾತರ್ಟ್ಟು, ತೃ-ಪ್ರೇಮಾ ತಿಮ್ಮ ಪೂಜಾರಿ.

ಜೆರ್ಸಿ ದನ ವಿಭಾಗ: ಪ್ರ-ಜಯ ಕಾರ್ತಟ್ಟು, ದ್ವಿ-ಸರೋಜ ಅಚ್ಲಾಡಿ, ತೃ- ಉಮಾಯಿ ಬಾನು ಹಂದಟ್ಟು. ಜೆರ್ಸಿ ಕಡಸು ವಿಭಾಗ: ಪ್ರ- ಜ್ಯೋತಿ ಕಾರ್ತಟ್ಟು, ದ್ವಿ-ಶೀನ ಕೊಮೆ, ತೃ-ಶ್ರೀನಿವಾಸ ಅಡಿಗ ಸಾಲಿಗ್ರಾಮ. ಜೆರ್ಸಿ ಕರು ವಿಭಾಗ: ಪ್ರ-ರತ್ನಾ ಹಂದಟ್ಟು, ದ್ವಿ-ಭಾಸ್ಕರ ಶೆಟ್ಟಿ ಕೋತಟ್ಟು, ತೃ-ವಿಶಾಲಾಕ್ಷಿ ದೇಲಟ್ಟು.

ಇತರ ದೇಶಿ ತಳಿ: ಪ್ರ-ನಿಶಾನ್ ನೀಲಾವರ, ದ್ವಿ- ರಾಮಕೃಷ್ಣ ಬಾಯರಿ ಬೇಳೂರು, ತೃ-ಜಗನ್ನಾಥ ಪೂಜಾರಿ ಹುಣ್ಸೆಮಕ್ಕಿ. ದೇಶಿ ತಳಿ ಕಡಸು: ಪ್ರ-ಇರ್ಷಾದ್ ವಾರಂಬಳ್ಳಿ, ದ್ವಿ- ಗಣೇಶ್ ಬೇಳೂರು, ತೃ-ಗುಂಡು ಶೆಟ್ಟಿ ಅಚ್ಲಾಡಿ. ದೇಶಿ ತಳಿ ಕರು: ಪ್ರ-ಲಕ್ಷ್ಮೀ ಕುಲಾಲ್ತಿ ಅಚ್ಲಾಡಿ, ದ್ವಿ- ರಾಜೇಂದ್ರ ಕೆದೂರು, ತೃ-ಗಿರಿಜಾ ಕಾರ್ಕಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News