ಹಿಂದೂ-ಮುಸ್ಲಿಮ್ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ರಾಜಕಾರಣಿಗಳನ್ನು ಸುಟ್ಟುಬಿಡಿ: ಒಪಿ ರಾಜ್‌ಭರ್

Update: 2019-01-14 15:08 GMT

ಲಕ್ನೊ, ಜ.14: ಧರ್ಮದ ಆಧಾರದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುವವರನ್ನು ಜನತೆ ಸುಟ್ಟುಬಿಡಬೇಕು ಎಂದು ಸುಹೇಲ್‌ದೇವ್ ಬಹುಜನ್ ಸಮಾಜವಾದಿ ಪಕ್ಷ(ಎಸ್‌ಬಿಎಸ್‌ಪಿ)ದ ಅಧ್ಯಕ್ಷ ಒಪಿ ರಾಜ್‌ಭರ್ ಹೇಳಿದ್ದಾರೆ.

ಹಿಂದು-ಮುಸ್ಲಿಮ್ ಗಲಭೆಯಲ್ಲಿ ಯಾರಾದರೂ ಗಣ್ಯ ರಾಜಕಾರಣಿ ಮೃತಪಡುತ್ತಾರೆಯೇ. ಯಾಕೆ ಹಿಂಸಾಚಾರದಲ್ಲಿ ರಾಜಕಾರಣಿಗಳು ಸಾಯುತ್ತಿಲ್ಲ. ನಿಮ್ಮನ್ನು ಧರ್ಮದ ಆಧಾರದಲ್ಲಿ ಗಲಭೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ರಾಜಕಾರಣಿಗಳನ್ನು ಸುಟ್ಟು ಬಿಡಬೇಕು. ಎಷ್ಟು ಪ್ರಚೋದನೆ ನೀಡಿದರೂ ಜನರು ಬೇರೆಯವರನ್ನು ಸುಟ್ಟುಬಿಡುವುದಿಲ್ಲ ಎಂದು ಆಗ ಅವರಿಗೆ ಗೊತ್ತಾಗುತ್ತದೆ. ಅವರು ಹಿಂದು ಮುಸ್ಲಿಮರನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ದೇಶದ ಸಂವಿಧಾನದ ಪ್ರಕಾರ, ಒಬ್ಬ ವ್ಯಕ್ತಿ ಈ ದೇಶದಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದರೆ ಆತ ದೇಶದ ಪ್ರಜೆ ಎನಿಸಿಕೊಳ್ಳುತ್ತಾನೆ. ಅವರನ್ನು ದೇಶದಿಂದ ಹೊರಗೆಸೆಯಲು ಆಗದು ಎಂದು ರಾಜ್‌ಭರ್ ಹೇಳಿದ್ದಾರೆ.

ಉತ್ತರಪ್ರದೇಶದ ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ರಾಜ್‌ಭರ್, ಬಿಜೆಪಿಯನ್ನು ಸದಾ ಟೀಕಿಸುತ್ತಿದ್ದಾರೆ. ಶನಿವಾರ ಹೇಳಿಕೆ ನೀಡಿದ್ದ ಅವರು, ಬಿಜೆಪಿಗೆ ಇಷ್ಟವಿಲ್ಲದಿದ್ದರೆ ತಮ್ಮ ಪಕ್ಷ ಎನ್‌ಡಿಎಯಿಂದ ಹೊರಬರಲಿದೆ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News