ಸಂಚುಗಾರ ತಹಾವುರ್ ರಾಣಾನನ್ನು ಗಡಿಪಾರು ಮಾಡಲಿದೆ ಅಮೆರಿಕ: ವರದಿ

Update: 2019-01-14 18:02 GMT

ಹೊಸದಿಲ್ಲಿ, ಜ. 14: ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ಪ್ರಸ್ತುತ ಅಮೆರಿಕದಲ್ಲಿ 14 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ತಹಾವುರ್ ಹುಸೈನ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

2011 ಡಿಸೆಂಬರ್‌ನಲ್ಲಿ ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಪಾಕಿಸ್ತಾನ-ಕೆನಡಾ ಪ್ರಜೆಯಾದ ರಾಣಾನನ್ನು ಗಡಿಪಾರು ಮಾಡಲು ಅಗತ್ಯವಿರುವ ಪತ್ರ ವ್ಯವಹಾರವನ್ನು ಪೂರ್ಣಗೊಳಿಸಲು ಭಾರತ ಸರಕಾರಕ್ಕೆ ಟ್ರಂಪ್ ಆಡಳಿತ ಸಂಪೂರ್ಣ ಸಹಕಾರ ನೀಡುತ್ತಿದೆ. ಮುಂಬೈ ಭಯೋತ್ಪಾದಕ ದಾಳಿಗೆ ಸಂಬಂಧಿಸಿ ರಾಣಾನನ್ನು 2009ರಲ್ಲಿ ಬಂಧಿಸಲಾಗಿತ್ತು.

 ಪಾಕಿಸ್ತಾನ ಮೂಲದ ಲಷ್ಕರೆ ತಯ್ಯಿಬ (ಎಲ್‌ಇಟಿ) ನಡೆಸಿದ ದಾಳಿಯಲ್ಲಿ ಅಮೆರಿಕದ ಪ್ರಜೆಗಳು ಸಹಿತ 166 ಮಂದಿ ಮೃತಪಟ್ಟಿದ್ದರು. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ 9 ಉಗ್ರರು ಹತರಾಗಿದ್ದರು. ಓರ್ವ ಉಗ್ರ ಅಜ್ಮಲ್ ಕಸಬ್‌ನನ್ನು ಬಂಧಿಸಲಾಗಿತ್ತು. ಅನಂತರ ನ್ಯಾಯಾಲಯ ಆತನಿಗೆ ಮರಣ ದಂಡನೆ ವಿಧಿಸಿತ್ತು.

2013ರಲ್ಲಿ ರಾಣಾನಿಗೆ 14 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. 2021 ಡಿಸೆಂಬರ್‌ನಲ್ಲಿ ಈತನನ್ನು ಬಿಡುಗಡೆ ಮಾಡಲಾಗುವುದು ಎಂದು ಅಮೆರಿಕ ಅಧಿಕಾರಿಗಳು ತಿಳಿಸಿದ್ದಾರೆ. ''ಇಲ್ಲಿನ ಕಾರಾಗೃಹ ಶಿಕ್ಷೆ ಪೂರ್ಣಗೊಂಡ ಬಳಿಕ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆ ಇದೆ. ನಾವು ಅದಕ್ಕಾ ಕಾರ್ಯ ನಿರ್ವಹಿಸುತ್ತಿದ್ದೇವೆ'' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಈ ಅವಧಿಯಲ್ಲಿ ಅಗತ್ಯ ಇರುವ ಪತ್ರ ವ್ಯವಹಾರಗಳನ್ನು ಪೂರ್ಣಗೊಳಿಸು ವುದು ಹಾಗೂ ಎರಡು ದೇಶಗಳು ಹಾಗೂ ಸ್ವತಂತ್ರ ನ್ಯಾಯಾಂಗದ ತೊಡಕನ್ನು ನಿವಾರಿಸುವುದು ನಮಗಿರುವ ಸವಾಲು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News