ಬಂಟ್ವಾಳ: ಎಸ್‍ಎಂಆರ್ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ

Update: 2019-01-15 11:58 GMT

ಬಂಟ್ವಾಳ, ಜ. 15: ಎಸ್‍ಎಂಆರ್ ಪಬ್ಲಿಕ್ ಸ್ಕೂಲ್ ಎರಡನೆ ವಾರ್ಷಿಕೋತ್ಸವ ನಡೆಯಿತು. ಬಿಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಂಸ್ಥೆಗೆ ಎರಡೂ ವರ್ಷ ಕೂಡಾ ಆಗಲಿಲ್ಲ, ಉತ್ತಮ ಹೆಸರನ್ನು ಗಳಿಸಿದೆ. ವಿಶಾಲವಾದ ಕಟ್ಟಡ ಹಾಗೂ ಆಟದ ಮೈದಾನ ಹೊಂದಿದೆ. ಸಂಸ್ಥೆಯು ಮುಂದೆ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.

ಎಸ್‍ಎಂ ರಶೀದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರೀ ಶಾಲೆಯಲ್ಲಿ ಕಳಿತರು ಸಾಲದು, ಶಾಲೆಯಲ್ಲಿ ಎಲ್ಲವನ್ನು ಕಲಿಸಲು ಸಾಧ್ಯವಿಲ್ಲ. ಮಕ್ಕಳ ಹೆತ್ತವರಿಗೆ ಕೂಡ ಜವಾಬ್ದಾರಿ ಇರುತ್ತದೆ. ನೀವು ಕೂಡ ನಿಮ್ಮ ಮಕ್ಕಳಲ್ಲಿ ಶಾಲೆಯಲ್ಲಿ ಕಲಿಸಿದ ಪಾಠವನ್ನು ವಿಚಾರಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಸುಬ್ರಹ್ಮಣ್ಯ ಭಟ್, ಎಸ್‍ಎಂಆರ್ ಪಬ್ಲಿಕ್ ಸ್ಕೂಲ್‍ನ ನಿರ್ದೇಶಕ ರಿಫಾತ್ ಅಹ್ಮದ್, ಸಂದೀಪ್, ಎಸ್‍ಎಂಆರ್ ಪಬ್ಲಿಕ್ ಸ್ಕೂಲ್ ಟ್ರಸ್ಟಿ ರಝೀನ ರಶೀದ್ ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯನಿ ಸಾಹಿಸ್ತಾ ವಾರ್ಷಿಕ ವರದಿ ವಾಚಿಸಿದರು. ಶಾಲೆಯ ಸಂಚಾಲಕ ಅಬ್ದುಲ್ ಲತೀಫ್ ಸ್ವಾಗತಿಸಿ, ಶಿಕ್ಷಕಿ ಹೇಮಲತಾ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News