ಮೀನುಗಾರರಿಗಾಗಿ ಮುಂದುವರಿದ ಹುಡುಕಾಟ

Update: 2019-01-15 15:41 GMT

ಮಲ್ಪೆ, ಜ.15: ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿರುವ ಬೋಟು ಸಹಿತ ಏಳು ಮಂದಿ ಮೀನುಗಾರರನ್ನು ಈಗಾಗಲೇ ಆಳ ಸಮುದ್ರ ಮೀನು ಗಾರಿಕೆಗೆ ತೆರಳಿದ 400ಕ್ಕೂ ಅಧಿಕ ಬೋಟುಗಳು ಹುಡುಕಾಟ ನಡೆಸುತ್ತಿದ್ದು, ಯಾವುದೇ ಸುಳಿವು ಲಭ್ಯವಾಗಿಲ್ಲ.

ಅದೇ ರೀತಿ ಇತ್ತ ಮಹಾರಾಷ್ಟ್ರ ಹಾಗೂ ಗೋವಾಕ್ಕೆ ತೆರಳಿರುವ ಪೊಲೀಸ್ ತಂಡಗಳು ಕೂಡ ವಿವಿಧ ಆಯಾಮಗಳಲ್ಲಿ ತನಿಖೆ ಹಾಗೂ ಹುಡುಕಾಟವನ್ನು ನಡೆಸುತ್ತಿವೆ. ಆದರೆ ನಾಪತ್ತೆಯಾದವರ ಬಗ್ಗೆ ಯಾವುದೇ ಮಾಹಿತಿಗಳು ದೊರೆಯುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News