ಅಹ್ಲುಸ್ಸುನ್ನಃ ಅಧ್ಯಯನ ಕೋರ್ಸ್ ಗೆ ಚಾಲನೆ

Update: 2019-01-15 15:47 GMT

ಬಂಟ್ವಾಳ,ಜ.15: ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ನಚ್ಚಬೊಟ್ಟು, ಗಡಿಯಾರ್ ಇದರ ಅಧೀನದಲ್ಲಿರುವ ಇಮಾಂ ಸುಬುಕಿ ರಿಸರ್ಚ್ ಅಕಾಡಮಿಯ(ಇಸ್ರಾ) ವತಿಯಿಂದ ನಡೆಸಲಾಗುವ ಧಾರ್ಮಿಕ ವಿದ್ವಾಂಸರಿಗೆ ಅಹ್ಲುಸ್ಸುನ್ನಃ ಅಧ್ಯಯನ ಕೋರ್ಸ್ ನ ಉದ್ಘಾಟನಾ ಸಮಾರಂಭವು ಬಿ.ಸಿ ರೋಡ್ ನಲ್ಲಿರುವ ದ.ಕ ಜಿಲ್ಲಾ ಎಸ್ಸೆಸ್ಸೆಫ್ ಕಚೇರಿಯಲ್ಲಿ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೋರ್ಸ್ ನ ಅನಿವಾರ್ಯತೆಯನ್ನು ತಿಳಿಸಿ, ತುಂಬು ಹೃದಯದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪ್ರವಾದಿ (ಸ)ರ ಮಹಿಮೆಯನ್ನು ವಿವರಿಸುತ್ತಾ ಮೊಹಲ್ಲಾಗಳಲ್ಲಿ ಸುನ್ನತ್ ಜಮಾಅತ್ ನ ಆಶಯ ಪ್ರಚಾರದ ವೇಳೆ ವಿದ್ವಾಂಸರು ಪಾಲಿಸಬೇಕಾದ ಮಹತ್ವಪೂರ್ಣ ಸಂಗತಿಗಳ ಬಗ್ಗೆ  ಸವಿಸ್ತಾರವಾಗಿ ವಿವರಿಸಿದರು.

ಮಲ್ಜಅ್ ಸಂಸ್ಥೆಯ ಸಾರಥಿ ಸಯ್ಯಿದ್ ಜಲಾಲುದ್ದೀನ್ ತಂಙಳ್ ಮಾತನಾಡಿ, ಕೋರ್ಸ್ ನ ರೂವಾರಿ ಮುಹಿಯದ್ದೀನ್ ಕಾಮಿಲ್ ಸಖಾಫಿಯವರು ಕರಾವಳಿ ಕರ್ನಾಟಕದಲ್ಲಿ ಮಾಡುತ್ತಿರುವ ಅಹ್ಲುಸ್ಸುನ್ನಃದ ಕ್ರಾಂತಿಕಾರಿ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಭಿಕರಲ್ಲಿ ಆವೇಶ ಮೂಡಿಸಿದರು.

ರಾಜ್ಯ ಎಸ್.ವೈ.ಎಸ್ ನಾಯಕ ಅಬೂಸುಫ್ಯಾನ್ ಮದನಿ ಮಾತನಾಡಿ, ಧಾರ್ಮಿಕ ವಿದ್ವಾಂಸರಿಗೆ ಈ ಕೋರ್ಸ್ ಯಾಕೆ ಅನಿವಾರ್ಯ ಎಂಬುವುದನ್ನು ವಿವರಿಸುತ್ತಾ ಹಲವು ಅನುಭವಗಳನ್ನು ಹಂಚಿದರು. ಕೋರ್ಸ್ ನ ರೂವಾರಿ ತೋಕೆ ಸಖಾಫಿ ಮಾತನಾಡಿ, ಆಶಯ ಪ್ರಚಾರದ ಶೈಲಿ ಹಾಗೂ ತಯಾರಾಗಬೇಕಾದ ರೀತಿಯನ್ನು ವಿವರಿಸಿ ಕೋರ್ಸ್ ನ ಮಾಹಿತಿಯನ್ನು ನೀಡಿದರು.

ಎಸ್.ವೈ.ಎಸ್ ನಾಯಕರಾದ ಡಿ.ಕೆ ಉಮರ್ ಸಖಾಫಿ ಕಂಬಳಬೆಟ್ಟು, ದಾರುಲ್ ಇಝ್ಝಾ ಸಾರಥಿ ಸಿದ್ದೀಕ್ ಸಖಾಫಿ ಮೂಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಶೀರ್ ಅಹ್ಸನಿ ತೋಡಾರ್ ಸ್ವಾಗತಿಸಿ, ಬಿ.ಕೆ ಯೂನುಸ್ ಇಮ್ದಾದಿ ಮಂಗಳಪದವು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News