ಉಡುಪಿ: ಕರ್ನಾಟಕ ಪ್ರೀಮಿಯರ ಲೀಗ್‌ನ ಟ್ರೋಫಿ ಅನಾವರಣ

Update: 2019-01-15 16:14 GMT

ಉಡುಪಿ, ಜ.15: ಯುಎಇಯಲ್ಲಿ ಜ.18ರಂದು ನಡೆಯಲಿರುವ ಅನಿ ವಾಸಿ ಕನ್ನಡಿಗರ ಕ್ರಿಕೆಟ್ ಹಬ್ಬ ಕರ್ನಾಟಕ ಪ್ರೀಮಿಯರ ಲೀಗ್ ಸೀಸನ್ 1 ಇದರ ಟ್ರೋಫಿ ಅನಾವರಣ ಕಾರ್ಯಕ್ರಮವು ಇತ್ತೀಚೆಗೆ ದುಬೈಯ ಅಲ್ ನಹ್ದಾ ಓಲಿವ್ ರೂಟ್ ಹೊಟೇಲ್ ಸಭಾಂಗಣದಲ್ಲಿ ಜರಗಿತು.

ಉದ್ಯಮಿ ಸರ್ವೋತ್ತಮ ಶೆಟ್ಟಿ ಟ್ರೋಫಿಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಕೆಪಿಎಲ್ ಆಯೋಜಕ ತನ್ವೀರ್ ಖಾಝಿ, ರೋವೆಲ್, ಹಮ್ದಾನ್, ಕೆಪಿಎಲ್ ತಂಡಗಳ ಮಾಲಕರು, ನಾಯಕರು, ಮ್ಯಾನೇಜರ್‌ಗಳು ಉಪಸ್ಥಿತರಿದ್ದರು.

ಎಸ್.ಎನ್.ಡೆಕ್ ಉಚ್ಚಿಲ, ಪಡೀಲ್ ಚಾಲೆಂಜರ್ಸ್‌ ಮಂಗಳೂರು, ಕೂರ್ಗ್ ಯುನೈಟೆಡ್ ದುಬೈ, ಇಲೆವೆನ್ ವಾರಿಯರ್ಸ್‌ ಬ್ಯಾಂಗಲೋರ್, ಆಟೋ ಡೀಲ್ ಮೂಡಬಿದ್ರೆ, ಹೀಟ್ ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್ಸ್‌, ಚಕ್ರವರ್ತಿ ಕುಂದಾಪುರ, ಕುಡ್ಲ ಸ್ಟ್ರೈಕರ್ಸ್‌, ಗಂಗೊಳ್ಳಿ ಸ್ಟ್ರೈಕರ್ಸ್‌, ಉಡುಪಿ ಬುಲ್ಸ್ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳಲಿವೆ.

ಜ.18ರಂದು ಯುಎಇನ ಅಜ್ಮಾನ್ನ ಹಮ್ರಿಯಾ ಕ್ರಿಕೆಟ್ ಮೈದಾನದಲ್ಲಿ ಹೊನಲು ಬೆಳಕಿನ ಕೆಪಿಎಲ್ ಸೀಸನ್ ಒಂದು ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಪಂದ್ಯವು ಒಟ್ಟು 3.5ಲಕ್ಷ ರೂ.ಗಳ ನಗದು ಮೊತ್ತವನ್ನು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News