ಕರಾಟೆ ಬ್ಲಾಕ್ ಬೆಲ್ಟ್ ಪರೀಕ್ಷೆ: ವಿದ್ಯಾರ್ಥಿಗಳು ಉತ್ತೀರ್ಣ

Update: 2019-01-15 16:16 GMT

ಉಡುಪಿ, ಜ.15: ಜಪಾನ್ ಶೊಡೊಕಾನ್ ಕರಾಟೆ ಡು ಕನ್ನಿಂಜುಕು ಆರ್ಗ ನೈಝೇಶನ್ ಇವರ ವತಿಯಿಂದ ಇತ್ತೀಚೆಗೆ ಮಹಾರಾಷ್ಟ್ರದ ಸತಾರಾದಲ್ಲಿ ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾ ನಡೆಸಿದ ಬ್ಲಾಕ್ ಬೆಲ್ಟ್ ಪರೀಕ್ಷೆ ಯಲ್ಲಿ ಕರ್ನಾಟಕದ ಒಂಭ್ತು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕಾಪು ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ಮುಹಮ್ಮದ್ ಸಿಮಾಕ್ ಹುಸೇನ್, ಅಬ್ದುಲ್ ಹನಾನ್, ಚಂದ್ರನಗರ ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಮುಹಮ್ಮದ್ ಝಾಹಿದ್, ಮುಹಮ್ಮದ್ ಫಾಯಿಸ್, ಬ್ರಹ್ಮಾವರ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನ ಶಶಾಂಕ್ ಎಸ್.ಪ್ರಭು, ಉಚ್ಚಿಲ ಮಹಾ ಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಮುಹಮ್ಮದ್ ಹಯ್ಯಿನ್, ಎರ್ಮಾಳ್ ವಿದ್ಯಾ ಪ್ರಭೋಧಿನಿ ಸ್ಕೂಲ್‌ನ ಆದಿತ್ಯ ಜೆ.ಕರ್ಕೇರ, ಶಿರ್ವ ಫೈಸುಲ್ ಆಂಗ್ಲ ಮಾಧ್ಯಮ ಶಾಲೆಯ ಅಬ್ದುಲ್ ಸಮಿ ರೆಹಾನ್, ಹೆಜಮಾಡಿ ಅಲ್ ಹಸಾರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಣಯ್ ವಿ.ಪುತ್ರನ್ ಬ್ಲಾಕ್ ಬೆಲ್ಟ್ ಪಡೆದು ಕೊಂಡಿದ್ದಾರೆ. ಇವರಿಗೆ ಕರಾಟೆ ಮುಖ್ಯಶಿಕ್ಷಕ ಮತ್ತು ಪರೀಕ್ಷ ಶಂಶುದ್ದೀನ್ ಎಚ್. ಶೇಕ್ ತರಬೇತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News